ಲಂಡನ್: ಭಾರತ ಮತ್ತು ಬ್ರಿಟನ್ನ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸಿರುವ, ಎರಡೂ ದೇಶಗಳಿಗೆ ಸೇರಿದ ‘ಅಗ್ರ 100 ಪ್ರಭಾವಿ ಮಹಿಳಾ ನಾಯಕಿಯರ ಪಟ್ಟಿ’ಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕಾಣಿಸಿಕೊಂ ಡಿದ್ದಾರೆ. ಲಂಡನ್ನ ಸಂಸತ್ತಿನಲ್ಲಿ ಮಂಗಳವಾರ ‘ಇಂಡಿಯಾ ಡೇ’ ಸಂಭ್ರಮಾಚರಣೆ ಪ್ರಯುಕ್ತ, ಅಲ್ಲಿನ ಗೃಹ ಸಚಿವ ಸಾಜಿದ್ ಜಾವೇದ್ ಆಣತಿಯ ಮೇರೆಗೆ ಪಟ್ಟಿಯನ್ನು ಗೃಹ ಇಲಾಖೆ ತಯಾರಿಸಿದೆ. ಕಾರ್ಪೊರೇಟ್ ವ್ಯವಹಾರ ಖಾತೆಯನ್ನೂ ನಿಭಾಯಿಸುತ್ತಿರುವ ನಿರ್ಮಲಾ ಅವರನ್ನು ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಬಲ್ಲ ಶಕ್ತಿಶಾಲಿ ಮಹಿಳೆ ಎಂದು ಬಣ್ಣಿಸಲಾಗಿದೆ.
Advertisement
ಯು.ಕೆ. ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಚಿವೆ ನಿರ್ಮಲಾ
01:26 AM Jun 26, 2019 | mahesh |
Advertisement
Udayavani is now on Telegram. Click here to join our channel and stay updated with the latest news.