Advertisement

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ: ಮಗಳ ಹಂತಕರು ನೇಣಿಗೇರುವುದನ್ನು ನೋಡಬೇಕಷ್ಟೇ

10:15 AM Jan 18, 2020 | Hari Prasad |

ನವದೆಹಲಿ: ನಿರ್ಭಯಾ ತಾಯಿ ಆಶಾದೇವಿ ತಾನು ರಾಜಕೀಯ ಪ್ರವೇಶಿಸುವ ಕುರಿತಾದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರೊಂದಿಗೆ ತನ್ನ ಮಾತುಕತೆಯಾಗಿರುವುದನ್ನು ನಿರಾಕರಿಸಿದ್ದಾರೆ.

Advertisement

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿದೆ ಮಾತ್ರವಲ್ಲದೇ ಈ ಕುರಿತಾಗಿ ಆಶಾದೇವಿ ಅವರೊಂದಿಗೆ ಕೆಲ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ವರದಿಯ ಕುರಿತಾಗಿ ಆಶಾದೇವಿ ಅವರನ್ನು ಪ್ರಶ್ನಿಸಿದಾಗ, ‘ನನಗೆ ರಾಜಕೀಯದಲ್ಲಿ ಯಾವುದೇ ರೀತಿಯಾದ ಆಸಕ್ತಿ ಇಲ್ಲ, ಮತ್ತು ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆದಿಲ್ಲ. ನನ್ನ ಮಗಳಿಗೆ ನ್ಯಾಯ ಸಿಗುವುದು ಮತ್ತು ಆಕೆಯ ಹೀನ ಸಾವಿಗೆ ಕಾರಣರಾದ ಪಾಪಿಗಳು ನೇಣಿಗೇರುವುದಷ್ಟೇ ನನಗೆ ಮುಖ್ಯವಾದದ್ದು’ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next