ಹೊಸದಿಲ್ಲಿ: ಇಡೀ ದೇಶವೇ ಎದುರು ನೋಡುತ್ತಿರುವ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಶೀಘ್ರವೇ ಜಾರಿಯಾಗಲಿದೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡಲಾರಂಭಿಸಿವೆ. ಈ ಅಪರಾಧಿಗಳು ಬಂಧನದಲ್ಲಿರುವ ತಿಹಾರ್ ಜೈಲಿನೊಳಗೆ ಈ ಹಿಂದೆ ಇದ್ದ ಗಲ್ಲು ಶಿಕ್ಷೆ ಜಾರಿ ವ್ಯವಸ್ಥೆಯನ್ನು ನವೀಕರಿಸಲಾಗಿದ್ದು, ಒಂದೇ ಬಾರಿಗೆ ನಾಲ್ವರಿಗೆ ಗಲ್ಲು ಶಿಕ್ಷೆ ಜಾರಿ ವ್ಯವಸ್ಥೆಗೆ ಉನ್ನತೀಕರಿಸಲಾಗಿದೆ.
ಈ ಮೂಲಕ ಇಡೀ ದೇಶದಲ್ಲೇ ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೇರಿಸುವ ಸೌಲಭ್ಯ ಹೊಂದಿದ ಮೊಟ್ಟಮೊದಲ ಜೈಲಾಗಿ ತಿಹಾರ್ ಹೊರಹೊಮ್ಮಿದೆ. ಈ ಬದಲಾವಣೆ ನಿರ್ಭಯಾ ಅತ್ಯಾಚಾರಿಗಳಿಗಾಗಿಯೇ ಮಾಡಲಾಗಿದೆ ಎಂಬ ವದಂತಿಗಳು ಹರಡಿವೆ.
ಮತ್ತೊಂದೆಡೆ, ತಮ್ಮ ಕ್ಷಮಾದಾನ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ತಮಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಎಂದು ನಿರ್ಭಯಾ ಅಪರಾಧಿಗಳು ತಿಹಾರ್ ಜೈಲಿನ ಆಡಳಿತಾಧಿಕಾರಿಗಳಿಗೆ ತಿಳಿಸಿದ್ದಾರೆ. ಹೀಗಾಗಿ, ಅವರ ಗಲ್ಲು ಶಿಕ್ಷೆ ಸದ್ಯಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಆದರೂ, ನೇಣು ವ್ಯವಸ್ಥೆ ಆಧುನೀಕರಣದಿಂದ ಅಪರಾಧಿಗಳ ನೇಣು ಖಾತ್ರಿ ಎಂಬ
ನಿರೀಕ್ಷೆಗಳು ಹುಟ್ಟಿಕೊಂಡಿವೆ.