Advertisement

ನಿರ್ಭಯಾ ಪಾಪಿಗಳಿಗೆ ಗಲ್ಲು ಶೀಘ್ರ

08:15 AM Nov 02, 2019 | Team Udayavani |

ಹೊಸದಿಲ್ಲಿ: ನಿರ್ಭಯಾ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳನ್ನು ಶೀಘ್ರವೇ ನೇಣಿಗೇರಿಸಲಾಗುವುದು. ಅಕಸ್ಮಾತ್‌, ಅಪರಾಧಿಗಳು ತಮ್ಮ ಕ್ಷಮಾಪಣೆ ಕೋರಿ, ರಾಷ್ಟ್ರಪತಿಯವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದರಷ್ಟೇ ಶಿಕ್ಷೆ ನೀಡಿಕೆ ಮುಂದೂಡಲ್ಪಡುತ್ತದೆ ಎಂದು ತಿಹಾರ್‌ ಜೈಲಿನ ಮಹಾ ನಿರ್ದೇಶಕ ಸಂದೀಪ್‌ ಗೋಯೆಲ್‌ ತಿಳಿಸಿದ್ದಾರೆ.

Advertisement

‘ಈ ಅಪರಾಧಿಗಳು ತಮ್ಮ ಶಿಕ್ಷೆಯ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಅವರು ಅರ್ಜಿ ಸಲ್ಲಿಸಿಲ್ಲ. ತಮ್ಮ ವಿರುದ್ಧದ ಶಿಕ್ಷೆಯನ್ನು ಇತರ ಮಾದರಿಯ ಶಿಕ್ಷೆಯಾಗಿ ಬದಲಾಯಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿಲ್ಲ. ಇನ್ನು, ರಾಷ್ಟ್ರಪತಿಯವರ ಕ್ಷಮೆ ಕೋರುವುದೊಂದೇ ಅವರ ಮುಂದಿರುವ ದಾರಿ.

ಔಪಚಾರಿಕವಾಗಿ, ಅಪರಾಧಿಗಳಿಗೆ ನೋಟಿಸ್‌ ನೀಡುವ ಮೂಲಕ ರಾಷ್ಟ್ರಪತಿಯವರ ಕ್ಷಮೆ ಕೋರಲು ಅವಕಾಶವಿದೆಯೆಂದು ಸೂಚಿಸಲಾಗಿದೆ. ಮನವಿಗೆ ನೋಟಿಸ್‌ ಜಾರಿಗೊಂಡ ದಿನದಿಂದ ಏಳು ದಿನಗಳ ಕಾಲಾವಕಾಶ ಇರಲಿದೆ” ಎಂದು ಗೋಯೆಲ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next