ಲಂಡನ್: ಭಾರತಕ್ಕೆ ತನ್ನನ್ನು ಗಡೀಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯವರ ಮಾನಸಿಕ ಸ್ಥಿತಿಯನ್ನು ಇಬ್ಬರು ಮನೋವೈದ್ಯರಿಂದ ಪರೀಕ್ಷೆ ನಡೆಸಲು ಲಂಡನ್ ಹೈಕೋರ್ಟ್ ನಿರ್ಧರಿಸಿದೆ.
ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಕೆಳಹಂತದ ನ್ಯಾಯಾಲಯ ನೀಡಿರುವ ತೀರ್ಪನ್ನು ನೀರವ್ ಮೋದಿ, ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಜೊತೆಗೆ, ತಮ್ಮ ಮಾನಸಿಕ ಸ್ಥಿತಿ ಸ್ಥಿಮಿತದಲ್ಲಿಲ್ಲದ ಕಾರಣ, ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ನ್ಯಾಯಾಲಯಕ್ಕೆ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ:ಸೌದಿ ರಾಜಮನೆತನಕ್ಕೆ ಪ್ರಧಾನಿ ಮೋದಿ ಸಾಂತ್ವನ
ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳುಳ್ಳ ಪೀಠ, ಮೋದಿಯವರನ್ನು ಇಬ್ಬರು ಪ್ರತ್ಯೇಕ ಮನೋವೈದ್ಯರು ಪರೀಕ್ಷಿಸಿ, ಮೋದಿಯವರ ಮಾನಸಿಕ ಸ್ಥಿತಿಯನ್ನು ತಮಗೆ ವರದಿ ಮಾಡಬೇಕೆಂದು ಸೂಚಿಸಿದೆ.