Advertisement

ನೀರವ್‌ ಮೋದಿಯ 4 ಸ್ವಿಸ್‌ ಖಾತೆ ನಿಷ್ಕ್ರಿಯ

02:40 AM Jun 28, 2019 | Team Udayavani |

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿರುವ ಉದ್ಯಮಿ ನೀರವ್‌ ಮೋದಿಯ ನಾಲ್ಕು ಸ್ವಿಸ್‌ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ನೀರವ್‌ ಹಾಗೂ ಆತನ ಸೋದರಿ ಪೂರ್ವಿ ಮೋದಿಯ ಖಾತೆಗಳಾಗಿದ್ದು, ಇವುಗಳಲ್ಲಿ ಒಟ್ಟು 280 ಕೋಟಿ ರೂ. ಇತ್ತು. ಜಾರಿ ನಿರ್ದೇಶನಾಲಯದ ಸೂಚನೆಯ ಮೇರೆಗೆ ಸ್ವಿಸ್‌ ಬ್ಯಾಂಕ್‌ ಈ ಖಾತೆಗಳಲ್ಲಿರುವ ಹಣವನ್ನು ಅಕ್ರಮದ ಹಣ ಎಂದು ಪರಿಗಣಿಸಿದ್ದು, ಖಾತೆಯನ್ನು ನಿಷ್ಕ್ರಿಯಗೊಳಿಸಿದೆ. ಇದರಿಂದ ನೀರವ್‌ ಈ ಖಾತೆಗಳಿಂದ ಹಣ ಹಿಂಪಡೆಯುವುದು ಅಸಾಧ್ಯ.

Advertisement

ಜುಲೈ 25ರವರೆಗೆ ಜೈಲು: ಪಿಎನ್‌ಬಿ ಪ್ರಕರಣದಲ್ಲಿ ಲಂಡನ್‌ನ ವ್ಯಾಂಡ್ಸ್‌ವರ್ತ್‌ ಜೈಲಿನಲ್ಲಿರುವ ನೀರವ್‌ ಮೋದಿ, ಜುಲೈ 25ರವರೆಗೂ ಜೈಲು ವಾಸ ಅನುಭವಿಸಬೇಕಿದೆ. ಇಂಗ್ಲೆಂಡ್‌ ಕೋರ್ಟ್‌ ಈ ಸಂಬಂಧ ಜೈಲು ವಾಸದ ಅವಧಿಯನ್ನು ವಿಸ್ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next