Advertisement
ಹೌದು. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ನಿಪ್ಪಾಣಿ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ವ್ಯಾಪಾರು-ವಹಿವಾಟು ಇಲ್ಲವೇ ಇಲ್ಲ. ಕೇವಲ ವಾಣಿಜ್ಯ ಮಳಿಗೆಯಿಂದ ಬರುತ್ತಿದ್ದ 20ರಿಂದ 25 ಲಕ್ಷ ರೂ. ವರಮಾನ ಈ ವರ್ಷ 50 ಸಾವಿರಕ್ಕೆಕುಸಿದಿದೆ. ಎಪಿಎಂಸಿ ಕಾಯ್ದೆಯಿಂದ ವ್ಯಾಪಾರ- ವಹಿವಾಟು ಕುಸಿತಕೊಂಡು ಆದಾಯದಲ್ಲಿ ಗಣನೀಯ ಇಳಿಕೆ ಕಂಡು ಬರಲಾರಂಭಿಸಿದೆ.
Related Articles
Advertisement
ಇದ್ದೂ ಇಲ್ಲದಂತಾಗಿದೆ ದನಗಳ ಪೇಟೆ: ನಿಪ್ಪಾಣಿ ಎಪಿಎಂಸಿ ವತಿಯಿಂದ ನಿಪ್ಪಾಣಿ ಹೊರವಲಯದಲ್ಲಿ ಪ್ರತಿ ಶುಕ್ರವಾರ ಜಾನುವಾರ ಸಂತೆ ನಡೆಯುತ್ತದೆ.ಆದರೆ ದನಗಳ ಸಂತೆಯಿಂದ ನಿರೀಕ್ಷೆ ಮಾಡಿದಷ್ಟುವರಮಾನ ಬರುತ್ತಿಲ್ಲ, ಒಂದು ಜಾನುವಾರು,ಮೇಕೆ, ಕುರಿ ಮಾರಾಟವಾದರೆ 5 ರೂ. ಸೆಸ್ ತೆಗೆದುಕೊಳ್ಳಬೇಕೆಂದು ನಿಯಮ ಇದೆ. ಆದರೆ ಯಾವುದೇ ದನಗಳು ಮಾರಾಟವಾಗಿಲ್ಲ ಎಂದುರೈತರು ಸಬೂಬು ಹೇಳಿ ಹಾಗೆಯೇ ಹೋಗುತ್ತಾರೆ.ಪ್ರತಿ ವಾರ ನಡೆಯುವ ದನಗಳ ಸಂತೆಯಲ್ಲಿ 400 ರೂ. ವರಮಾನವಾಗಲು ಹರಸಾಹಸ ಪಡಬೇಕಾಗುತ್ತಿದೆ. ಪೇಟೆಯಲ್ಲಿ ಸಂಗ್ರಹವಾಗುವ ವರಮಾನ ಕುಡಿಯುವನೀರು, ವಿದ್ಯುತ್ ಬಿಲ್‌ಗೂಗೆ ಸಾಕಾಗಲ್ಲ ಎನ್ನುತ್ತಾರೆ ಅಧಿಕಾರಿಗಳು.
ಆದಾಯ ಕೊರತೆಯಿಂದ ಸಿಬ್ಬಂದಿ ಔಟ್:
ಎಪಿಎಂಸಿಗಳು ಉತ್ತಮವಾಗಿ ನಡೆಯಲು ಸಮರ್ಪಕ ಸಿಬ್ಬಂದಿ ಅವಶ್ಯ. ಆದರೆ ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಮತ್ತು ಸಿಪಾಯಿ ಸೇರಿದಂತೆ ಅನೇಕ ಸಿಬ್ಬಂದಿ ಆದಾಯ ಕುಂಠಿತವಾಗಿರುವ ಪರಿಣಾಮ ತೆಗೆದು ಹಾಕಿದ್ದಾರೆ. ಇದರಿಂದ ಎಪಿಎಂಸಿಗಳು ನಡೆಯುವುದೇ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡರು
ಎಪಿಎಂಸಿಗಳಿಗೆ ಸೆಸ್ ಹೆಚ್ಚಿಸಲು ಆಡಳಿತ ಮಂಡಳಿ ಪ್ರಯತ್ನ ಮಾಡುತ್ತಿತ್ತು. ಆದರೆ ಈಗಿನ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗೆ ಬರುವ ವರಮಾನ ಕಡಿಮೆಯಾಗುತ್ತಿದೆ. ಮೆಕ್ಕೆಜೋಳ, ಸೋಯಾ ಮುಂತಾದ ಬೆಳೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನಗಳನ್ನುತಪಾಸಣೆಗೆ ಒಳಪಡಿಸಿ ಸೆಸ್ ಸಂಗ್ರಹಿಸಲಾಗುತ್ತಿತ್ತು. ಸರ್ಕಾರದ ತಿದ್ದುಪಡಿಯಿಂದ ಎಪಿಎಂಸಿ ಬಾಗಿಲು ಮುಚ್ಚುತ್ತವೆ. – ಪಿ.ಐ.ಕೋರೆ, ಮಾಜಿ ಅಧ್ಯಕ್ಷರು, ಎಪಿಎಂಸಿ ನಿಪ್ಪಾಣಿ.
ನಿಪ್ಪಾಣಿ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಇಲ್ಲವಾಗಿದೆ. ವ್ಯಾಪಾರಿ ಮಳಿಗೆ, ಗೋಡೌನ್ ಮತ್ತಿತರಕಡೆಯಿಂದ ಬರುವ ವರಮಾನ ಕಡಿಮೆಯಾಗಿದೆ.ಭದ್ರತಾ ಸಿಬ್ಬಂದಿ, ಸಿಪಾಯಿ, ವಾಹನ ಚಾಲಕರನ್ನುತೆಗೆದು ಹಾಕಲಾಗಿದೆ. ಈಗ ಎಪಿಎಂಸಿ ನಿರ್ವಹಣೆಮಾಡುವುದೇ ಕಷ್ಟಕರವಾಗಿದೆ. ಎಪಿಎಂಸಿ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. – ಬಿ.ಎಸ್.ಬಾವಿಹಾಳ, ಕಾರ್ಯದರ್ಶಿ ,ಎಪಿಎಂಸಿ ನಿಪ್ಪಾಣಿ
ಕಾರ್ಪೋರೇಟ್ ಕಂಪನಿಗಳ ತಾಳಕ್ಕೆ ಕುಣಿಯುತ್ತಿರುವ ಸರ್ಕಾರ ಎಪಿಎಂಸಿಗೆ ತಿದ್ದುಪಡಿ ತಂದಿರುವುದು ಎಪಿಎಂಸಿಮುಚ್ಚಲು ಕಾರಣವಾಗಿದೆ. ಎಪಿಎಂಸಿಗೆ ಬಲತುಂಬಬೇಕಾದ ಸರ್ಕಾರವೇ ಎಪಿಎಂಸಿ ಅವನತಿಗೆ ಕಾರಣವಾಗುತ್ತಿದೆ. ಈಗಲೂ ಸರ್ಕಾರ ಕಾಯ್ದೆ ಹಿಂಪಡೆದು ಎಪಿಎಂಸಿಗೆ ಬಲ ತುಂಬಬೇಕು. –ತ್ಯಾಗರಾಜ ಕದಮ್ ರೈತ ಸಂಘದ ಮುಖಂಡರು
–ಮಹಾದೇವ ಪೂಜೇರಿ