Advertisement

Kerala ನಿಫಾ ಸೋಂಕಿಗೆ ಬಲಿಯಾದ ಬಾಲಕನ ಸಂಪರ್ಕದಲ್ಲಿದ್ದವರು 406 ಮಂದಿ!

10:22 PM Jul 22, 2024 | Team Udayavani |

ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ನಿಫಾ ಸೋಂಕಿಗೆ ಬಲಿಯಾದ 14 ವರ್ಷದ ಬಾಲಕನ ಸಂಪರ್ಕದಲ್ಲಿದ್ದ ಎಲ್ಲಾ 406 ಮಂದಿಯ ಪಟ್ಟಿ ಸಿದ್ಧಗೊಂಡಿದೆ. ಈ ಪೈಕಿ 194 ಮಂದಿ ಹೈ ರಿಸ್ಕ್ ಪಟ್ಟಿಯಲ್ಲಿದ್ದಾರೆ.

Advertisement

ಮೃತ ಬಾಲಕ ತಿರುವನಂತಪುರಂನ 4 ಹಾಗೂ ಪಾಲಕ್ಕಾಡ್‌ ಜಿಲ್ಲೆಯ ಇಬ್ಬರೊಂದಿಗೂ ಸಂಪರ್ಕ ಹೊಂದಿದ್ದ ಎಂಬುದು ಆತಂಕ ಹೆಚ್ಚಿಸಿದೆ. ಅವರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆ ಜಿಲ್ಲೆಗಳಿಗೂ ಸೋಂಕು ಹರಡಬಹುದಾದ ಶಂಕೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಇನ್ನು ಸೋಮವಾರದವರೆಗೂ ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಸೋಂಕು ಪರೀಕ್ಷೆಗೆ ಕಳುಹಿಸಿದ್ದ 13 ಮಂದಿಯ ಮಾದರಿ ಪೈಕಿ 9 ಜನರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದಿದ್ದಾರೆ.

ಮಾದರಿ ಸಂಗ್ರಹಿಸಿದ್ದ 13 ಮಂದಿಯ ಪೈಕಿ 6 ಮಂದಿಗೆ ಸೋಂಕಿನ ಗುಣಲಕ್ಷಣಗಳು ಕಂಡುಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next