ಕೋಯಿಕ್ಕೋಡ್ : ಕೇರಳದಲ್ಲಿ ನಿಫಾ ವೈರಸ್‌ಗೆ ಮತ್ತೆರಡು ಜೀವಗಳು ಬಲಿಯಾಗಿವೆ. ಇದರೊಂದಿಗೆ ಈ ಮಾರಣಾಂತಿಕ ವೈರಸ್‌ಗೆ ಈ ತನಕ ಬಲಿಯಾದವರ ಸಂಖ್ಯೆ 15ಕ್ಕೆ ಏರಿದಂತಾಗಿದೆ.
ಕೇರಳದಲ್ಲಿ ನಿಫಾ ವೈರಸ್‌ಗೆ ತುತ್ತಾದವರು ಕೋಯಿಕ್ಕೋಡ್‌ನ ನಿವಾಸಿಗಳೇ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕರಸ್ಸೆರಿಯದ 28 ವರ್ಷ ಪ್ರಾಯದ ವ್ಯಕ್ತಿಯ ರಕ್ತದ ಮಾದರಿಯಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯದ ದೃಢ ಪಡಿಸಿದೆ.
ನಿನ್ನೆ ಬುಧವಾರ ಕೇರಳ ಮೂಲದ ಯೋಧನೋರ್ವ ಕೋಲ್ಕತಾದಲ್ಲಿ ಮೃತಪಟ್ಟಿದ್ದು ಆತನ ಸಾವಿಗೆ ನಿಫಾ ವೈರಸ್ ಕಾರಣವೆಂದು ಶಂಕಿಸಲಾಗಿದೆ.
ನಿಫಾ ವೈರಸ್ ಕೇರಳದ ಕೋಯಿಕ್ಕೋಡ್‌ನಲ್ಲಿ ಮೊತ್ತಮೊದಲು ಪತ್ತೆಯಾಗಿತ್ತು. ಇಲ್ಲಿನ ಮನೆಯೊಂದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬ ನಾಲ್ವರು ಮೃತಪಟ್ಟಾಗ ಅವರ ಮನೆಯ ಪಾಳು ಬಿದ್ದ ಬಾವಿಯಲ್ಲಿ ಸತ್ತ ಬಾವಲಿ ಪತ್ತೆಯಾಗಿತ್ತು.