Advertisement
ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಅಕ್ಟೋಬರ್ 8 ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಚಿತ್ರವನ್ನು “ವೈಟ್ ಅಂಡ್ ಗ್ರೇ ಮೀಡಿಯಾ’ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
Related Articles
Advertisement
ಇನ್ನು, ಈ ಚಿತ್ರದಲ್ಲಿ ಲಿವಿಂಗ್ ರಿಲೇಶನ್ಶಿಪ್ ಬಗ್ಗೆಯೂ ಹೇಳಲಾಗಿದೆ ಯಂತೆ. ಈ ಬಗ್ಗೆ ಮಾತನಾಡುವ ಸೂರಜ್, “ಚಿತ್ರದಲ್ಲಿ ಲಿವಿಂಗ್ ರಿಲೇಶನ್ ಶಿಪ್ ಬಗ್ಗೆಯೂ ಹೇಳಿದ್ದೇವೆ. ಇವತ್ತಿಗೆ ಸಮಾಜ ಆ ಸಂಬಂಧವನ್ನು ಹೇಗೆ ನೋಡುತ್ತಾರೆ ಎಂಬ ಅಂಶದ ಜೊತೆಗೆ ಅದಕ್ಕೆ ನಮ್ಮ ಸಿನಿಮೇಟಿಕ್ ಆ್ಯಂಗಲ್ ಕೂಡಾ ನೀಡಲಾಗಿದೆ. ಈ ಚಿತ್ರದ ಹೈಲೈಟ್ಗಳಲ್ಲಿ ಕಥೆ ಹಾಗೂ ಚಿತ್ರಕಥೆ ಕೂಡಾ ಒಂದು’ ಎನ್ನುತ್ತಾರೆ ಸೂರಜ್.
ನಾಯಕಿ ಧನ್ಯಾ ರಾಮ್ಕುಮಾರ್ ಅವರು ಸಿಕ್ಕಾಪಟ್ಟೆ ಎಕ್ಸೆ„ಟ್ ಆಗಿದ್ದಾರೆ. ಅದಕ್ಕೆ ಕಾರಣ ಸಿನಿಮಾದ ಬಿಡುಗಡೆಯ ದಿನ ಘೋಷಣೆಯಾಗಿರೋದು. “ನಾನು ಹಾಗೂ ನನ್ನ ಅಮ್ಮ ಈಗಾಗಲೇ ಈ ಸಿನಿಮಾವನ್ನು ನೋಡಿದ್ದೇವೆ. ಆದರೆ, ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ. ಸಾಕಷ್ಟು ಕಥೆ ಕೇಳಿದ್ದೆ. ಆದರೆ ನನಗೆ ಈ ಸಿನಿಮಾದ ಕಥೆ ಇಷ್ಟವಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ.
ಇನ್ನು ಚಿತ್ರಕ್ಕೆ ಸಂಗೀತ ನೀಡಿದ ರಘು ದೀಕ್ಷಿತ್ ಹಾಗೂ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.