Advertisement

ಬೀದರ್ ಜಿಲ್ಲೆಯಲ್ಲಿಂದು 9 ಮಂದಿಗೆ ಸೋಂಕು ದೃಢ: 42 ಜನ ಬಿಡುಗಡೆ

07:10 PM Jun 09, 2020 | keerthan |

ಬೀದರ್: ಗಡಿ ನಾಡು ಬೀದರನಲ್ಲಿ ಮಹಾರಾಷ್ಟ್ರ ಕಂಟಕ ಮುಂದುವರೆದಿದ್ದು, ಮಂಗಳವಾರ ಜಿಲ್ಲೆಯಲ್ಲಿ ಮತ್ತೆ ಒಂಬತ್ತು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಈಗ 279ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ 42 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ಆಶಾದಾಯಕ ಎನಿಸಿದೆ.

Advertisement

ಸೋಮವಾರವಷ್ಟೇ ಜಿಲ್ಲೆಯಲ್ಲಿ ಕೋವಿಡ್ ಆರ್ಭಟಿಸಿ 48 ಜನರಲ್ಲಿ ಪಾಸಿಟಿವ್ ಪತ್ತೆಯಾಗಿದ್ದವು. ಈಗ ಮತ್ತೆ ಮರು ದಿನವೇ 9 ಕೇಸ್‌ಗಳು ಕಾಣಿಸಿಕೊಂಡಿವೆ. ಇವರಲ್ಲಿ ಆರು ಮಂದಿ ಮಹಿಳೆಯರು, ಮೂವರು ಪುರುಷರಾಗಿದ್ದಾರೆ.  ಸೋಂಕಿತರೆಲ್ಲರಿಗೂ ಮಹಾರಾಷ್ಟ್ರ ಸಂಪರ್ಕ ಇದೆ ಅಲ್ಲದೇ ಎಲ್ಲರೂ ಗ್ರಾಮೀಣ ಭಾಗದ ವಲಸೆ ಕಾರ್ಮಿಕರೇ ಆಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪಾಸಿಟಿವ್‌ಗಳು ಪತ್ತೆಯಾಗಿವೆ. ಬಸವಕಲ್ಯಾಣ ತಾಲೂಕಿನ ಜಾಫರವಾಡಿ, ಗಂಗಾರಾಮ್ ತಾಂಡಾ, ಚಿಕ್ಕನಗಾಂವ್ ತಾಂಡಾ ಮತ್ತು ಧಾಮುನಗರ ತಾಂಡಾದಲ್ಲಿ ತಲಾ ಒಂದು ಕೇಸ್ ಸೇರಿ ಒಟ್ಟು ನಾಲ್ಕು ಪ್ರಕರಣಗಳು, ಔರಾದ ಪಟ್ಟಣದ ಒಂದು, ತಾಲೂಕಿನ ಎಕಂಬಾ ಗ್ರಾಮದಲ್ಲಿ ಎರಡು ಕೇಸ್ ಸೇರಿ ಒಟ್ಟು ಮೂರು, ಭಾಲ್ಕಿ ತಾಲೂಕಿನ ಭಾಟಸಾಂಗವಿ ಹಾಗೂ ಹುಮನಾಬಾದ ತಾಲೂಕಿ ಹಿಪ್ಪರಗಾ ಗ್ರಾಮದಲ್ಲಿ ತಲಾ ಒಂದು ಕೇಸ್‌ಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ 297 ಪ್ರಕರಣಗಳು ವರದಿಯಾದಂತೆ ಆಗಿದ್ದು, 132 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ 141 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆಯ ಹೇಲ್ತ್ ಬುಲೇಟಿನ್ ದೃಡಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next