Advertisement

ನಿಲ್ಲದ “ಮಹಾ” ಮಳೆ, ಸಾಂಗ್ಲಿಯಲ್ಲಿ ರಕ್ಷಣಾ ಬೋಟ್ ಮುಳುಗಿ 9 ಸಾವು

09:54 AM Aug 09, 2019 | Nagendra Trasi |

ಮಹಾರಾಷ್ಟ್ರ: ಕಳೆದ ಒಂದು ವಾರದಿಂದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದ ಸೋಲಾಪುರ್, ಸಾಂಗ್ಲಿ, ಸತಾರಾ, ಕೊಲ್ಲಾಪುರ್ ಮತ್ತು ಪುಣೆಯಲ್ಲಿ 1.4 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಬುಧವಾರ ಗೋವಾದಿಂದ ಎನ್ ಡಿಆರ್ ಎಫ್ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ನೌಕಾಪಡೆ ಸಿಬ್ಬಂದಿಗಳು ಆಗಮಿಸಿದ್ದು, ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.

ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿರಂತರ ಮಳೆಯ ಅನಂತರ ಉಂಟಾದ ಪ್ರವಾಹ ಪರಿಸ್ಥಿತಿಯು ಬುಧವಾರವೂ ಭೀಕರವಾಗಿ ಮುಂದುವರಿದಿದ್ದು, ಸುಮಾರು 51,000 ಜನರು ಮತ್ತು 200 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ ಹಾಗೂ 340ಕ್ಕೂ ಹೆಚ್ಚು ಸೇತುವೆಗಳನ್ನು ಮುಳುಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಗ್ಲಿಯಲ್ಲಿ ರಕ್ಷಣಾ ಬೋಟ್ ಮುಳುಗಿ 9 ಜನರ ಸಾವು:

ಭಾರೀ ಪ್ರವಾಹಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಲು ತೆರಳಿದ್ದ ಬೋಟ್ ಮುಳುಗಿದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಗುರುವಾರ ನಡೆದಿದೆ. ಖಾಸಗಿ ರಕ್ಷಣಾ ಬೋಟ್ ನಲ್ಲಿ 30 ಜನರನ್ನು ಕರೆತರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next