Advertisement

Chhattisgarh; ಎರಡು ಪ್ರತ್ಯೇಕ ಅವಘಡದಲ್ಲಿ ಬಾವಿಗೆ ಬಿದ್ದು 9 ಮಂದಿ ಮೃತ್ಯು

08:56 PM Jul 05, 2024 | Team Udayavani |

ಜಾಂಜ್‌ಗೀರ್-ಚಂಪಾ/ಕೋರ್ಬಾ: ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಮತ್ತು ಕೊರ್ಬಾದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂಬತ್ತು ಜನರು ಬಾವಿಗಳಲ್ಲಿ ಶಂಕಿತ ವಿಷಕಾರಿ ಅನಿಲವನ್ನು ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಂದರು.

Advertisement

ಜಾಂಜ್‌ಗಿರ್-ಚಂಪಾದಲ್ಲಿರುವ ಬಿರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಕಿರ್ದಾ ಗ್ರಾಮದಲ್ಲಿ ರಾಮಚಂದ್ರ ಜೈಸ್ವಾಲ್ (60), ರಮೇಶ್ ಪಟೇಲ್ (50), ಅವರ ಇಬ್ಬರು ಮಕ್ಕಳಾದ ರಾಜೇಂದ್ರ (20) ಮತ್ತು ಜಿತೇಂದ್ರ (25), ಮತ್ತು ಟಿಕೇಶ್ವರ್ ಚಂದ್ರ (25) ಮೃತಪಟ್ಟಿದ್ದಾರೆ ಎಂದು ಬಿಲಾಸ್‌ಪುರ ರೇಂಜ್ ಇನ್‌ಸ್ಪೆಕ್ಟರ್ ಸಂಜೀವ್ ಶುಕ್ಲಾ ತಿಳಿಸಿದ್ದಾರೆ.

“ಜೈಸ್ವಾಲ್ ಮನೆಯ ಆವರಣದಲ್ಲಿರುವ 30 ಅಡಿ ಆಳದ ಬಾವಿಗೆ ಇಳಿದಾಗ ಮೂರ್ಛೆ ಹೋಗಿದ್ದು, ಪತ್ನಿ ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಅನುಸರಿಸಿ ನೆರೆಹೊರೆಯಲ್ಲಿದ್ದ ಪಟೇಲ್ ಕುಟುಂಬದ ಇತರ ಮೂವರು ಬಾವಿಗೆ ಇಳಿದಿದ್ದು, ಯಾರೊಬ್ಬರೂ ಹೊರಗೆ ಬರದಿದ್ದಾಗ ಚಂದ್ರು ಬಾವಿಯೊಳಗೆ ಪ್ರವೇಶಿಸಿದ. ಆತನೂ ಪ್ರಜ್ಞೆ ತಪ್ಪಿ ಬಿದ್ದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಐಜಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ, ಬಾವಿಯೊಳಗೆ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಪುರುಷರು ಸಾವನ್ನಪ್ಪಿದ್ದಾರೆಂದು ತೋರುತ್ತಿದೆ, ಆದರೂ ಶವಪರೀಕ್ಷೆ ವರದಿಗಳು ಬಂದ ನಂತರ ನಿಖರವಾದ ಕಾರಣ ತಿಳಿಯುತ್ತದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾವಿಯನ್ನು ಮುಚ್ಚಲು ಮರದ ಪಟ್ಟಿಗಳನ್ನು ಬಳಸಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಗುಡುಗು ಮತ್ತು ಮಳೆಯ ನಂತರ, ಒಂದು ಪಟ್ಟಿಯು ಬಾವಿಗೆ ಬಿದ್ದಿದ್ದು ಅದನ್ನು ಮೇಲಕ್ಕೆ ಎತ್ತಲು ಇಳಿದಿದ್ದರು ಎಂದು ಹೇಳಲಾಗಿದೆ.

Advertisement

ಇನ್ನೊಂದು ಘಟನೆ

ಕೊರ್ಬಾದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಜಹ್ರು ಪಟೇಲ್ (60), ಅವರ ಮಗಳು ಸಪಿನಾ (16) ಮತ್ತು ಕುಟುಂಬದ ಇತರ ಇಬ್ಬರು ಸದಸ್ಯರಾದ ಶಿವಚರಣ್ ಪಟೇಲ್ (45) ಮತ್ತು ಮನ್ಬೋಧ್ ಪಟೇಲ್ (57) ಸಾವನ್ನಪ್ಪಿದ್ದಾರೆ.

“ಪ್ರಾಥಮಿಕ ಮಾಹಿತಿಯ ಪ್ರಕಾರ, ಜಹರು ಅವರು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದು, ಮಗಳು ಅವನನ್ನು ಉಳಿಸಲು ಬಾವಿಗೆ ಇಳಿದಿದ್ದು ಇಬ್ಬರೂ ಹೊರಗೆ ಬರದಿದ್ದಾಗ ಮತ್ತಿಬ್ಬರು ಬಾವಿಗೆ ಹಾರಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮೇಲ್ನೋಟಕ್ಕೆ, ಬಾವಿಯೊಳಗೆ ಕೆಲವು ವಿಷಕಾರಿ ಅನಿಲವಿತ್ತು, ಇದು ಉಸಿರುಗಟ್ಟಿ ಮುಳುಗಲು ಕಾರಣವಾಯಿತು. ಆದರೆ, ತನಿಖೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕೊರ್ಬಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ಹೇಳಿದ್ದಾರೆ.

ಎರಡೂ ಘಟನೆಗಳಲ್ಲಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬಂದಿಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಎರಡು ಘಟನೆಗಳಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next