Advertisement

ಎಲ್ಲ ಸಾಹಿತ್ಯ ಪ್ರಕಾರಕ್ಕೂ ಜನಪದವೇ ಬೇರು : ನೀನಾಸಂ ಇಸ್ಮಾಯಿಲ್‌

07:47 PM Jan 09, 2022 | Team Udayavani |

ರಾಣಿಬೆನ್ನೂರ: ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳ ಬೇರಾಗಿದೆ. ಆಗಿನ ಕಾಲದ ಹಿರಿಯರು ಜನಪದ ಸಾಹಿತ್ಯದ ಮೂಲಕ ತಮ್ಮ ನೈಜ ಜೀವನದಲ್ಲಿ ಸಂಸ್ಕಾರ ನೀಡುತ್ತಾ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದರು ಎಂದು ಹಾಸ್ಯ ಕಲಾವಿದ ನೀನಾಸಂ ಇಸ್ಮಾಯಿಲ್‌ ಹೇಳಿದರು.

Advertisement

ನಗರದ ಎಸ್‌ಜೆಎಂವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಸಾಂಸ್ಕೃತಿಕ ವೇದಿಕೆಯಡಿ ಕನ್ನಡ ವಿಭಾಗದ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ
ಸಂಪನ್ಮೂಲ ವ್ಯಕ್ತಿಯಾಗಿ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಸ್ತುತ ದಿನಮಾನಗಳಲ್ಲಿ ಇಂದಿನ ಯುವ ಜನತೆ ಜನಪದ ಸಾಹಿತ್ಯದಲ್ಲಿರುವ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿಯ ಜನಪದ ಹಾಡುಗಳ ಒಂದು ವೈಶಿಷ್ಠತೆಯಲ್ಲಿನ ಒಂದೊಂದು ಅರ್ಥವನ್ನು ತಿಳಿದುಕೊಂಡು ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ
ಬಳಸಿಕೊಳ್ಳಬೇಕು ಎಂದರು.

ಹಿಂದಿನ ಕಾಲದಲ್ಲಿ ಅನಕ್ಷರಸ್ಥರೂ ಸಹ ಹಾಡುವುದು ಹಾಗೂ ಕಥೆಗಳನ್ನು ಹೇಳುವುದು ಮಾಡುತ್ತಿದ್ದರು. ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಂಡು, ಪರಭಾಷೆಯ ಸಂಸ್ಕೃತಿಗಳನ್ನು
ಹೆಚ್ಚಾಗಿ ಅಳವಡಿಸಿಕೊಳ್ಳುವುದನ್ನು ಬಿಟ್ಟು ನಮ್ಮಲ್ಲಿರುವ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಭಾಷೆ ವಿಶ್ವದಲ್ಲಿರುವ ಬೇರೆ ಬೇರೆ ಭಾಷೆಗಳಿಗೆ ಹೋಲಿಸಿದಾಗ ಅತ್ಯಂತ ಶ್ರೀಮಂತ, ಸಂಪತ½ರಿತ ಮತ್ತು ಉತ್ಕೃಷ್ಠ ಸಾಹಿತ್ಯವಾಗಿದೆ.

ನಮ್ಮ ನಮ್ಮ ಭಾಷೆಯ ಬಗ್ಗೆ ನಮಗೆ ಅಗಾಧವಾದ ಗೌರವ ಭಾವನೆ ಇರಬೇಕು. ಪಠ್ಯಪುಸ್ತಕಳಿಗೆ ಮಾತ್ರ ಸೀಮಿತವಾಗದೇ ಅದರ ಆಚೆಯೂ ಬೇರೆ ಬೇರೆ ಪುಸ್ತಕಗಳನ್ನು ಓದಿ ಗ್ರಹಿಸಿಕೊಂಡು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರಾಚಾರ್ಯ ಡಾ| ಜಿ.ಇ.ವಿಜಯಕುಮಾರ ಮಾತನಾಡಿ, ವಿದ್ಯಾರ್ಥಿನಿಯರು ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು ವಿಶೇಷವಾಗಿ
ಜನಪದ ಸಾಹಿತ್ಯದ ವಿಶಿಷ್ಠತೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಭಾಷಾ ಪ್ರಜ್ಞೆ ಇಟ್ಟುಕೊಂಡು, ದೇಶಪ್ರೇಮ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಆದರ್ಶ ಬದುಕು
ಕಟ್ಟಿಕೊಳ್ಳಬೇಕು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಂ.ಆರ್‌. ಚಿದಾನಂದಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿನಿಯೂ ನಮ್ಮ ಕನ್ನಡ ಸಾಂಸ್ಕೃತಿಕ ವೇದಿಕೆಯ
ಗುಣಗಳನ್ನು ಅಳವಡಿಸಿಕೊಂಡರೆ ಮೂಲಕ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ. “ಬೆಳಗಾಗಿ ಎದ್ದು ಯ್ನಾರ್ಯರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿಯನ್ನು ಎದ್ದೊಂದು ಗಳಿಗೆ ನೆನೆದೇನ’ ಎಂಬ ಜನಪದ ಹಾಡು ಹೇಳುವ ಮೂಲಕ ನಮ್ಮ ಮಣ್ಣಿನಲ್ಲಿ ಅಪಾರವಾದ ದೈವೀ ಶಕ್ತಿ ಇದೆ ಎಂದು ಭಾವಿಸಿ ಬೇಗನೇ ಎದ್ದು ಭೂತಾಯಿಗೆ ನಮಿಸಿ
ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಹಾಗಾಗಿ, ಹಿಂದಿನ ಜನರು ಹೆಚ್ಚು ಕಾಲ ಬದುಕುತ್ತಿದ್ದರು ಎಂದು ತಿಳಿಸಿದರು.

Advertisement

ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಮಾಲತೇಶ ಪೂಜಾರ, ಪ್ರಧಾನ ಕಾರ್ಯದರ್ಶಿ ಮಂಜುಳಾ ಜಲ್ಲಿ ಮತ್ತು ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು. ರಾಧಿಕಾ ಚಲವಾದಿ ಹಾಗೂ ಸಂಗಡಿಗರು ಪ್ರಾರ್ಥಿಸಿ, ಪ್ರೀತಿ ಎಸ್‌.ಜಿ. ಸ್ವಾಗತಿಸಿ, ಶಿಲ್ಪಾ ಮಡಿವಾಳರ ಮತ್ತು ತನುಜಾ ನೀಲಮ್ಮನವರ ನಿರೂಪಿಸಿ, ಅನಿತಾ ಮೂಡಬಾಗಿಲು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next