Advertisement
ರಾಜ್ಯ ಮೆಡಿಕಲ್ ರೇಡಿಯಾಲಾಜಿಕಲ್ ಟೆಕ್ನಾಲಜಿಸ್ಟ್ಸ್ ಅಸೋಸಿಯೇಷನ್ ಶನಿವಾರ ನಿಮ್ಹಾನ್ಸ್ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ರೇಡಿಯಾಲಾಜಿಗೆ ಸಂಬಂಧಿಸಿದ 20ನೇ ರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿಮ್ಹಾನ್ಸ್ ದೇಶದ ಜನರ ಮನಗೆದ್ದಿರುವುದು ಹೆಮ್ಮೆಪಡುವ ಸಂಗತಿ ಎಂದರು.
Related Articles
Advertisement
ಡಿಜಿಟಲ್ ತಂತ್ರಜ್ಞಾನವನ್ನು ಹೆಚ್ಚು ಬಳಕೆ ಮಾಡಿಕೊಂಡು ಜನರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವಂತೆ ಮನವಿ ಮಾಡಿದರು. ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ನಿಮ್ಹಾನ್ಸ್ ಬಡಜನರ ಸೇವೆ ಮಾಡುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ನಂಬಿಕೆ ಉಳಿಸಿಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿನ ಈ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಮಣಿಪಾಲ್ ಆಸ್ಪತ್ರೆಯ ಚೇರ್ಮನ್ ಡಾ.ಎಚ್.ಸುದರ್ಶನ್ ಬಲ್ಲಾಳ್ ಮಾತನಾಡಿ, ರೇಡಿಯಾಲಾಜಿ ಕ್ಷೇತ್ರ ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯಾಗಿದೆ. ವಿದೇಶಕ್ಕೆ ಹೋಲಿಸಿದರೆ ರೇಡಿಯಾಲಾಜಿ ಕ್ಷೇತ್ರದಲ್ಲಿ ಭಾರತ ಅಷ್ಟೊಂದು ಅಭಿವೃದ್ಧಿ ಸಾಧಿಸಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿ ಹಲವು ಪರಿಕರಗಳು ಭಾರತದಲ್ಲೇ ಉತ್ಪಾದನೆಯಾಗುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.
ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್, ಮುಖ್ಯಸ್ಥ ಪ್ರೊ.ಅರುಣ್ ಕುಮಾರ್ ಗುಪ್ತಾ, ಎಸ್.ಎ. ವಜೀದ್, ಮಣಿಪಾಲ್ ಆಸ್ಪತ್ರೆಯ ಪ್ರೊ.ಬಿ.ವೈ.ಟಿ.ಆರ್ಯ, ಎಂ.ಎಸ್.ರಾಮಯ್ಯ ಆಸ್ಪತ್ರೆಯ ಡಾ.ಉಮೇಶ್, ಎಂ.ಆರ್. ರಾಮಚಂದ್ರ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.