Advertisement

ನೀಲಕುರಂಜಿ ಪುಷ್ಪೋತ್ಸವ

06:20 AM Oct 29, 2017 | Harsha Rao |

1934ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ಸಂಡೂರಿಗೆ ಭೇಟಿ ನೀಡಿದಾಗ ಅಲ್ಲಿನ ನಿಸರ್ಗ ಸೌಂದರ್ಯವನ್ನು ಕಂಡು SEE SANDUR IN SEPTEMBER ಎಂದು ಉದ್ಗರಿಸಿದ್ದರು. ಇದು ನಿಜ. ಗಣಿಗಾರಿಕೆಯ ಅವಿರತ ದಾಳಿಯ ಮಧ್ಯದಲ್ಲೂ ಅಲ್ಲಲ್ಲಿ ಈ ಸೌಂದರ್ಯ ಕಂಗೊಳಿಸುತ್ತದೆ. ಸಂಡೂರು ಬಳ್ಳಾರಿಯ ಕಾಶ್ಮೀರವೇ ಸರಿ. ಈ ದೈವದತ್ತ‌ ಸ್ಕಂದಸಿರಿಯ ನಾಡಿನಲ್ಲಿ ಅಳಿದುಳಿದ ಪರ್ವತ ಶ್ರೇಣಿಯಲ್ಲಿ ಅನೇಕ ಜೀವ ವೈವಿಧ್ಯ ಅಡಗಿದೆ. ಪ್ರಾಚೀನ ಕಾಲದ ಕುಮಾರಸ್ವಾಮಿ ದೇವಸ್ಥಾನವಿರುವ ಶ್ರೀಸ್ವಾಮಿಮಲೈ ಬೆಟ್ಟ ಶ್ರೇಣಿಯಲ್ಲಿ 12 ವರ್ಷಕ್ಕೊಮ್ಮೆ ಅರಳುವ ಅಪರೂಪದ ನೀಲಕುರಂಜಿ ಹೂ ಅರಳಿದೆ. ಬಳ್ಳಾರಿಯ ಜೀವ ವೈವಿಧ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪನಮೇಶಲು ನೇತೃತ್ವದಲ್ಲಿ ಡಾ| ಅರವಿಂದ ಪಾಟೀಲ, ನಿಜಗುಣಸ್ವಾಮಿ, ವಿದ್ಯಾಧರಸ್ವಾಮಿಯವರೊಳಗೊಂಡ ನಮ್ಮ ತಂಡ ಮುಂಜಾನೆ ಎತ್ತರವಾದ ಪ್ರದೇಶಕ್ಕೆ ಹೋದಾಗ ಇಬ್ಬನಿಯ ನಡುವೆ ಫೋಟೋಗ್ರಫಿ ಮಾಡಲು ಸಾಹಸಪಡ ಬೇಕಾಯಿತು. ಸ್ವಲ್ಪ ಹೊತ್ತಿನಲ್ಲಿ ಇಬ್ಬನಿ ಕರಗಿ ಸುಂದರವಾದ ಬೆಟ್ಟ ಶ್ರೇಣಿ ಯಲ್ಲಿ ನೀಲ ಸುಂದರಿಯು ಬೀಸುವ ತಂಗಾಳಿಗೆ ಬಳುಕುತ್ತಾ ನಮ್ಮನ್ನು ಕೈ ಬೀಸಿ ಕರೆದಳು.

Advertisement

ನೀಲಕುರಂಜಿಯು ಹೊರನೋಟಕ್ಕೆ ತೀರಾ ಸಾಮಾನ್ಯವಾದ ಸಣ್ಣ ಕುರುಚಲು ಸಸ್ಯ, 1300ರಿಂದ 2400 ಮೀಟರ್‌ ಎತ್ತರದ ಬೆಟ್ಟ ಶ್ರೇಣಿಗಳ ಕಣಿವೆಗಳಲ್ಲಿ ಬೆಳೆಯುತ್ತದೆ. 30ರಿಂದ 60 ಸೆಂ.ಮೀ. ಎತ್ತರ ಬೆಳೆಯುವ ಈ ಪೊದರು ಸಸ್ಯವನ್ನು ವೈಜ್ಞಾನಿಕವಾಗಿ ಸ್ಟ್ರೋಬಿಲ್ಯಾಂಥಸ್‌ ಕುಂತಿಯಾನ ಎಂದು ಕರೆದು ಅಕಾಂಥೇಸೀ ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. 

ಲಕ್ಷಾಂತರ ವರ್ಷಗಳಿಂದ ತನ್ನ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನೀಲ ಕುರಂಜಿಯ ಹೂ ತಳೆಯುತ್ತಿದ್ದರೂ ನಮಗೆಲ್ಲ ಈ ಅಚ್ಚರಿಯ ವಿವರಗಳು ತಿಳಿದು ಬಂದಿದ್ದು ಕಳೆದ 150 ವರ್ಷಗಳಿಂದೀಚೆಗೆ. ಹತ್ತೂಂಬತ್ತನೇ ಶತಮಾನದಲ್ಲಿ ಗಾರ್ಟೆçಡ್‌ ಡೇನಿಯಲ್‌ ನೀಸ್‌ವಾನ್‌ ಎಸೆನ್ಬೆಕ್‌ ಎಂಬುವರು ಈ ಹೂವನ್ನು ಪ್ರಥಮವಾಗಿ ಗುರುತಿಸಿದರಾದರೂ, ರಾಬರ್ಟ್‌ ವೈಟ್‌ ಮತ್ತು ಕ್ಯಾಪಟ್‌° ಬೆಡ್ಡೋಮ್‌ ಎಂಬ ಸಸ್ಯ ವಿಜ್ಞಾನಿಗಳ ಅವಿರತ ಪರಿಶ್ರಮದಿಂದ 1826ರಿಂದ 1934ರವರೆಗಿನ ನೀಲಕುರಂಜಿಯ ಪುಷ್ಪಧಾರಣೆ ಹತ್ತು ವೈಜ್ಞಾನಿಕ ವಿವರಣೆಗಳನ್ನು “ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ’ ಸಂಶೋಧನಾ ಪತ್ರಿಕೆಯಲ್ಲಿ ಡಾ| ಮಾರಿಸನ್‌ ಎಂಬ ಸಸ್ಯವಿಜ್ಞಾನಿ ದಾಖಲಿಸಿ¨ªಾರೆ. 

ಕುರಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತವೆ. ಅವುಗಳಲ್ಲಿ 46 ಜಾತಿಯವು ಭಾರತದಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಕೆಲವು ಜಾತಿಗಳು 12 ವರ್ಷಗಳ ಬದಲಿಗೆ 16 ವರ್ಷಗಳಿಗೊಮ್ಮೆ ಅರಳುತ್ತವೆ. ದೀರ್ಘ‌ ಕಾಲಕ್ಕೊಮ್ಮೆ ಅರಳುವ ಈ ತೆರನಾದ ಹೂವುಗಳನ್ನು “ಪಿಲಿಟೆಸಿಯಲ್ಸ್‌’ ಎನ್ನುವರು. ಸಂಡೂರಿನ ಈ ಪರ್ವತ ಶ್ರೇಣಿಯಲ್ಲಿ ಈ ನೀಲಿ ಪುಷ್ಪವು ಈಗ ಅರಳಿ ನಿಂತಿದೆ. ಹೂವುಗಳು ಜೇನ್ನೊಣ, ದುಂಬಿಗಳನ್ನು ಆಕರ್ಷಿಸಿ ಪರಾಗಸ್ಪರ್ಶಗೊಂಡು ತದನಂತರ ಹೂಗಳು ಬಾಡಿ ನೆಲಕ್ಕೆ ಉರುಳುತ್ತವೆ. ಆಗ ತೆನೆಗಳಲ್ಲಿ ಬೀಜಗಳು ಫ‌ಲಿತಗೊಳ್ಳುತ್ತವೆ.  

ನೀಲಕುರಂಜಿ ಯೌವನದ ಪರಿಶುದ್ಧ ಪ್ರೇಮದ ಪ್ರತೀಕವೂ ಆಗಿದೆ, ತಮಿಳು ನಾಡಿನ ನೀಲಗಿರಿ, ಪಳನಿ, ಅಣ್ಣಾಮಲೈಗಳನ್ನು ಒಳಗೊಂಡಂತೆ ನೀಲ ಕುರಿಂಜ ಪ್ರದೇಶದ ಒಡೆಯನೇ ಮುರುಗ, ಬೆಟ್ಟಗಾಡಿನ ತರುಣಿ “ವಲ್ಲಿ’ ಯನ್ನು ಮುರುಗ ವರಿಸಿದಾಗ ನೀಲಕುರಿಂಜಿಯ ಹಾರವನ್ನು ಧರಿಸಿದ್ದನಂತೆ. ಕೊಡೈಕೆನಾಲ್‌ನಲ್ಲಿ ಮುರುಗನೇ ಆರಾಧ್ಯ ದೈವವಾದ “ಕುರಿಂಜಿ ಆಂಡವರ್‌’ ದೇವಸ್ಥಾನವಿದೆ.

Advertisement

– ಶಶಿಧರಸ್ವಾಮಿ ಆರ್‌. ಹಿರೆಮಠ ಕದರಮಂಡಲಗಿ

Advertisement

Udayavani is now on Telegram. Click here to join our channel and stay updated with the latest news.

Next