Advertisement
ಬಿಎಫ್ಐ ತೆಗೆದುಕೊಂಡಿರುವ ನಿರ್ಧಾರ ಹಾಗೂ ತನ್ನ ಆಯ್ಕೆಯನ್ನು ಮೇರಿ ಕೋಮ್ ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲ ನಿಖತ್ ಅವರನ್ನು ಹಲವು ಸಲ ಸೋಲಿಸಿದ್ದು, ಆಕೆ ತನಗೊಬ್ಬ ಸ್ಪರ್ಧಿಯೇ ಅಲ್ಲ ಎಂದಿದ್ದಾರೆ.ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಮೇರಿ ಕೋಮ್, “ನಿರ್ಧಾರ ತೆಗೆದುಕೊಂಡಿರುವುದು ಭಾರತೀಯ ಬಾಕ್ಸಿಂಗ್ ಒಕ್ಕೂಟ. ಆ ನಿಯಮ ಮೀರುವುದಿಲ್ಲ. ನಾನು ಮುಂದಿನ ಪ್ರದರ್ಶನ ಬಗ್ಗೆ ಮಾತ್ರ ಯೋಚಿಸಿದ್ದೇನೆ’ ಎಂದರು.
“ಆಯ್ಕೆ ಟ್ರಯಲ್ಸ್‌ನಲ್ಲಿ ನಿಖತ್ ಎದುರಿಸಲು ನನಗೇನೂ ಭಯವಿಲ್ಲ. ಸ್ಯಾಫ್ ಗೇಮ್ ಸೇರಿದಂತೆ ಇತರ ಕೂಟಗಳಲ್ಲಿ ಆಕೆಯನ್ನು ಅನೇಕ ಸಲ ಸೋಲಿಸಿದ್ದೇನೆ. ಹೀಗಿದ್ದರೂ ಆಕೆ ನನ್ನ ವಿರುದ್ಧ ಸವಾಲೆಸೆಯುತ್ತಿದ್ದಾಳೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಯಾರು ಪದಕ ತರಬಲ್ಲರು ಎನ್ನುವುದು ಬಿಎಫ್ಐಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಬಿಎಫ್ಐ ಪಾರದರ್ಶಕ ಕ್ರಮ ತೆಗೆದುಕೊಂಡಿದೆ’ ಎಂದು ಮೇರಿ ಕೋಮ್ ತಿಳಿಸಿದ್ದಾರೆ.
Related Articles
Advertisement
ಬಿಂದ್ರಾ ತಮ್ಮ ಪಾಡಿಗೆ ಇರಲಿ“ಬಾಕ್ಸಿಂಗ್ ನಿಯಮ ಗೊತ್ತಿಲ್ಲದಿದ್ದರೆ ತಮ್ಮ ಪಾಡಿಗೆ ತಾವು ಇರುವುದು ಒಳ್ಳೆಯದು’ ಎಂದು ನಿಖತ್ ಜರೀನ್ ಪರ ಬ್ಯಾಟ್ ಮಾಡಿದ್ದ ಒಲಿಂಪಿಯನ್ ಶೂಟರ್ ಅಭಿನವ್ ಬಿಂದ್ರಾಗೆ ಮೇರಿ ಕೋಮ್ ತಿರುಗೇಟು ನೀಡಿದ್ದಾರೆ.
“ಬಿಂದ್ರಾರಂತೆ ನಾನೂ ಪದಕ ಗೆದ್ದವಳು, ಹಲವು ಸಲ ವಿಶ್ವ ಚಾಂಪಿಯನ್ ಆಗಿದ್ದೇನೆ. ನಿಯಮ ಗೊತ್ತಿಲ್ಲದಿದ್ದರೆ ಬಾಕ್ಸಿಂಗ್ ವಿಷಯದಲ್ಲಿ ಅನಗತ್ಯ ತಲೆ ಹಾಕಬೇಡಿ, ಇದು ನಿಮಗೆ ಸಂಬಂಧಪಡದ ವಿಷಯ’ ಎಂದು ಮೇರಿ ಕೋಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.