Advertisement

2023 ರ ವಿಧಾನಸಭಾ ಚುನಾವಣೆ ಜೆಡಿಎಸ್‌ಗೆ ಕೊನೆ ಚುನಾವಣೆ; ನಿಖಿಲ್‌ಕುಮಾರಸ್ವಾಮಿ  

06:08 PM Sep 10, 2022 | Team Udayavani |

ಕುಣಿಗಲ್:  2023 ರ ರಾಜ್ಯ ವಿಧಾನ ಸಭಾ ಚುನಾವಣೆ, ನಮ್ಮ ಪಾಲಿಗೆ ಒಂದು ರೀತಿ, ಕೊನೆಯ ಚುನಾವಣೆಯಾಗಲಿದೆ, ಹಾಗಾಗಿ ರಾಜ್ಯದಲ್ಲಿ ಜೆಡಿಎಸ್ ಒಂದು ಹೊಸ ಅಧ್ಯಯ ಪ್ರಾರಂಭವಾಗಬೇಕು, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಶನಿವಾರ ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೇಪಾಳ್ಯ ಬಳಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹೆಚ್.ಡಿ.ದೇವೇಗೌಡರಿಗೆ 89 ವರ್ಷ ವಯಸ್ಸಾಗಿದೆ ಅವರು ಮೂರು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಇದು ಕಾರ್ಯಕರ್ತರ ಗೊಂದಲ್ಲಕ್ಕೆ ಕಾರಣವಾಗಿತ್ತು.  2023 ರ ವಿಧಾನಸಭಾ ಚುನಾವಣೆ ನಮ್ಮ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಆಗಲಿದೆ, ಹಾಗಾಗಿ ರಾಜ್ಯದಲ್ಲಿ ಜೆಡಿಎಸ್ ಒಂದು ಹೊಸ ಅಧ್ಯಯ ಪ್ರಾರಂಭವಾಗಬೇಕು. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವಂತ ಜವಾಬ್ದಾರಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಮೇಲೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ವಿಜಯಪುರ: ವಿದ್ಯುತ್ ತಂತಿ ಸ್ಪರ್ಶ ; ಕುರಿಗಾಯಿ ಬಾಲಕಿ ಬಲಿ

2023 ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ರಾಜ್ಯದ ಎಲ್ಲಾ ಕಡೆ ಚರ್ಚೆ ಪ್ರಾರಂಭವಾಗಿದೆ. ಹಾಗಾಗಿ ಜೆಡಿಎಸ್ ಅನ್ನು ನಂಬರ್ ಒನ್ ಸ್ಥಾನಕ್ಕೆ ಬರಬೇಕೆಂಬ ಗುರಿ ಇಟ್ಟುಕೊಂಡು ಕಾರ್ಯಕರ್ತರು ಕೆಲಸ ಮಾಡಬೇಕು ಎಂದ ಅವರು ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷದ ಶಕ್ತಿ ಏನೆಂಬುದನ್ನು ಪಕ್ಷದ ಕಾರ್ಯಕರ್ತರು ತೋರಿಸಿದ್ದಾರೆ, ಹಾಗಾಗಿ ಮುಂದಿನ ದಿನದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷದ ಅಂಗಿಲ್ಲದೆ. ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಹೇಳಿದರು,

Advertisement

ಹೆಚ್‌ಡಿಕೆ ಜೀವ ಉಳಿದ್ದಿದೇ ಹೆಚ್ಚು : ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲೂ ಕುಮಾರಸ್ವಾಮಿ ಅವರೇ ಹೋಗಬೇಕು, ಕುಮಾರಸ್ವಾಮಿ ಅವರು ಮುಖ ತೋರಿಸಬೇಕೆಂಬ ಜನರ ಭಯಕ್ಕೆ ಇದೆಯಲ್ಲಾ ಅದನ್ನು ಹೀಡೆರಿಸುವುದು ಬಹಳ ಕಷ್ಟವಾಗಿದೆ, 20 ವರ್ಷದಿಂದ ನಿರಂತರವಾಗಿ ರಾಜ್ಯದ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿದ್ದಾರೆ, ಹಾಗೂ ಎರಡು ಭಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ, ಆದರೆ ನಮ್ಮ ತಂದೆ ಉಳಿದಿದ್ದೇ ಹೆಚ್ಚು, ಇವತ್ತು ನಮ್ಮ ತಂದೆಯನ್ನು ಉಳಿಸಿರುವುದು ಭಗವಂತ ರೈತರ ಜೀವನವನ್ನು ಹಸಿನುಗೊಳಿಸಬೇಕೆಂಬ ಉದ್ದೇಶದಿಂದ ಅವರನ್ನು ಉಳಿಸಿದ್ದಾನೆ ಎಂದು ಹೇಳಿದರು.

26 ರಿಂದ ಪಂಚರತ್ನ ರಥ ಪ್ರಾರಂಭ : ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪಂಚರತ್ನ ರಥಯಾತ್ರೆ ಇದೇ ತಿಂಗಳು 26 ರಿಂದ ಪ್ರಾರಂಭವಗಲಿದ್ದು, ಪ್ರಥಮ ಹಂತದಲ್ಲಿ ರಾಜ್ಯದ ನೂರು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪಂಚರತ್ನ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದೆಂದು ತಿಳಿಸಿದರು.

ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ ಕುಣಿಗಲ್ ಅಂದರೆ ದೇವೇಗೌಡರು, ಕುಮಾರಸ್ವಾಮಿಯಾಗಿದೆ ಆ ಕುಟುಂಬ ಅಧಿಕಾರಕ್ಕೆ ಬರಬೇಕೆಂದರೇ ಮತ್ತೆ ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಡಾ.ರವಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಎನ್.ಜಗದೀಶ್, ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ತಾ.ಪಂ ಮಾಜಿ ಅಧ್ಯಕ್ಷ ಹರೀಶ್‌ನಾಯ್ಕ್ ಮಾಜಿ ಉಪಾಧ್ಯಕ್ಷ ಶಿವರಾಜಯ್ಯ, ಯುವಮುಖಂಡ ಪ್ರಮೋದ್‌ಶಿವಣ್ಣ  ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next