Advertisement
ಸಮಾವೇಶದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ 20 ವರ್ಷ ಆಡಳಿತ ನಡೆಸಿದವರು ಏನು ಮಾಡಲಿಲ್ಲ. ಭಗೀರಥ ಎಂದು ಹೇಳಿಕೊಂಡು ಓಡಾಡ್ತಾರಷ್ಟೇ. ನಿಜವಾದ ಭಗೀರಥ ನಮ್ಮ ನಿಮ್ಮೆಲ್ಲರ ಪ್ರೀತಿಯ ಕುಮಾರಣ್ಣ. ಚನ್ನಪಟ್ಟಣಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಗೆಲ್ತಾರೆ ಕುಮಾರಣ್ಣ ಎಂದು ಹೀಗಾಗಿ ನನಗೆ ವಿಶ್ವಾಸವಿದೆ. 50 ಸಾವಿರಕ್ಕೂ ಹೆಚ್ಚು ಬಹುಮತದಿಂದ ಗೆಲುವು ಸಾಧಿಸುತ್ತಾರೆ ಎಂದರು.
Related Articles
Advertisement
2023 ರ ಚುನಾವಣೆಯಲ್ಲಿ ನಾನು ಸಿಎಂ ಆಗಬೇಕು ಎನ್ನುವುದು ದೈವ ಇಚ್ಛೆ, ನಿಮ್ಮ ಆಶೀರ್ವಾದ. ನಮ್ಮ ರಾಜ್ಯದಲ್ಲಿ ಹಣಕ್ಕೆ ತೊಂದರೆಯಿಲ್ಲ, ಭಾಗ್ಯಲಕ್ಷ್ಮೀ ತುಂಬಿದ್ದಾಳೆ. ಸಾಮಾನ್ಯ ಕಾರ್ಯಕರ್ತ ನಿಲ್ಲಿಸಿದರೂ ಕನಕಪುರ ಕ್ಷೇತ್ರದ ಮಹಾ ಜನತೆ 60-70 ಸಾವಿರ ಮತ ನೀಡುತ್ತಾರೆ. ಕನಕಪುರ ತಾ. ಸಾತನೂರಿನಲ್ಲಿ ಮಧ್ಯರಾತ್ರಿ 1:45 ಗಂಟೆಗೆ ಹೋದೆ. ಅರ್ಧ ರಾತ್ರಿಯಲ್ಲೂ ಕನಕಪುರ ಜನ ನಮ್ಮನ್ನ ಸ್ವಾಗತ ಮಾಡಿದರು ಎಂದರು.
ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೈಸ್ ಕಂಪನಿ ಹತ್ತಿರ ಹೋಗಿ ಒಬ್ಬೊಬ್ಬರು ಒಂದು ಪ್ಯಾಕೆಟ್ ತಗೊಂಡು ಬಂದರು. ಆದರೆ ನಾನು ರೈತರ ಜಮೀನು ಉಳಿವಿಗಾಗಿ ಹೋರಾಟ ಮಾಡಿದೆ. ಆದರೆ ಆಗಿನ ಸಮ್ಮಿಶ್ರ ಸರ್ಕಾರದ ಮಹಾ ನಾಯಕರು ನನ್ನನ್ನು ಬಿಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗ ಹಣ ಇಲ್ಲ ಹೇಗೆ ಸಾಲಮನ್ನಾ ಮಾಡುತ್ತಾರೆ ಎಂದರು. ಆದರೆ ಸರ್ಕಾರ ಇದ್ದ ಹದಿನಾಲ್ಕು ತಿಂಗಳಲ್ಲಿ ರೈತರ ಸಾಲಮನ್ನಾ ಮಾಡಿದೆ. ಕಣ್ವಾ ರಸ್ತೆ ಕಾಮಗಾರಿ ವಿಳಂಬ ವಿಚಾರ ಮನೆಗೆ ಕರೆಸಿ ಎಚ್ಚರಿಕೆ ಕೊಟ್ಟೆ, ಕಳಪೆ ಕಾಮಗಾರಿ ಆದರೆ ಬ್ಲ್ಯಾಕ್ ಲಿಸ್ಟ್ ಹಾಕಿಸ್ತೀನಿ ಅಂದೆ. ಇಲ್ಲಿನ ಭಗೀರಥ ಅಂತ ಕಟೌಟ್ ಹಾಕಿಸಿಕೊಳ್ಳುವನು ನನ್ನ ಬಗ್ಗೆ ಮಾತಾಡ್ತಾನೆ ಎಂದು ಹೆಸರು ಹೇಳದೆ ಸಿಪಿ ಯೋಗೇಶ್ವರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು.