Advertisement
* ನೀವು ಜಿಲ್ಲೆಯಲ್ಲಿ ಗುರುತಿಸಿರುವ ಸಮಸ್ಯೆಗಳೇನು?ನಿಖೀಲ್: ನಾನೂ ರೈತ ಕುಟುಂಬದಿಂದ ಬಂದವನು. ನನಗೂ ರೈತರು ಹಾಗೂ
ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅರಿವಿದೆ. ಅದಕ್ಕೆ ಪರಿಹಾರ ಸೂಚಿಸಲು ಶಕ್ತನಾಗಿದ್ದೇನೆ. ಅದಕ್ಕೆ ಅವಕಾಶ ಬೇಕು. ಅದಕ್ಕಾಗಿ ಜನರ ಆಶೀರ್ವಾದ ಬಯಸಿ ಬಂದಿದ್ದೇನೆ. ಜಿಲ್ಲೆಯ ಜನರು ನನ್ನ ತಾತ ಹಾಗೂ ನನ್ನ ತಂದೆಯನ್ನು
ಕೈಬಿಟ್ಟಿಲ್ಲ. ನನ್ನನ್ನೂ ಕೈಬಿಡುವುದಿಲ್ಲವೆಂಬ ನಂಬಿಕೆ ಇದೆ.
ನಿಖೀಲ್: ಕುಟುಂಬ ರಾಜಕಾರಣ ಇಂದು ಯಾವ ಪಕ್ಷದಲ್ಲಿಲ್ಲ. ಜೆಡಿಎಸ್ ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರು ಕಟ್ಟಿ ಸಮರ್ಥವಾಗಿ ಬೆಳೆಸಿದ್ದಾರೆ. ಅವರಿಗೆ ಶಕ್ತಿ ತುಂಬುವ ಸಲುವಾಗಿ ನಾವು ರಾಜಕೀಯ ಪ್ರವೇಶ ಮಾಡಿದ್ದೇವೆ. ನಾವು ಯಾರನ್ನೂತುಳಿದು ಮೇಲೆ ಬರುತ್ತಿಲ್ಲ. ಹಿಂಬಾಗಿಲ ಪ್ರವೇಶವನ್ನೂ ಪಡೆಯುತ್ತಿಲ್ಲ. ನಮ್ಮಲ್ಲಿರುವ ರಾಜಕೀಯ ಇಚ್ಛಾಶಕ್ತಿ, ಅಭಿವೃದ್ಧಿಯ ಬದ್ಧತೆಯನ್ನು ಗುರುತಿಸಿ ಜನರು ನಮ್ಮನ್ನು ಆಯ್ಕೆ ಮಾಡುವರು ಎಂಬ ವಿಶ್ವಾಸ ನನಗಿದೆ. * ಅಭಿವೃದ್ಧಿಯನ್ನು ನೀವು ಚುನಾವಣಾ ಅಜೆಂಡಾ ಮಾಡಿಕೊಂಡಿರುವಿರಾ?
ನಿಖೀಲ್: ಹೌದು. ಅಭಿವೃದ್ಧಿ ನಮ್ಮ ಪ್ರಮುಖ ಅಜೆಂಡಾವಾಗಿದೆ. ಅದನ್ನೇ ಜನರ ಮುಂದಿಟ್ಟು ಮತ ಕೇಳುತ್ತಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 8500 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಜಿಲ್ಲೆಯ ಅಭಿವೃದ್ಧಿ
ಕಾಮಗಾರಿಗೆ ನೀಡಿದ್ದಾರೆ. ಇದು ಅಭಿವೃದ್ಧಿಯ ಬಗ್ಗೆ ಅವರಿಗಿರುವ ಬದ್ಧತೆಯಲ್ಲವೇ? ವಿರೋಧ ಪಕ್ಷದವರ ವಿರೋಧದ ನಡುವೆಯೂ ಜಿಲ್ಲೆಯ ಇತಿಹಾಸದಲ್ಲಿ ಯಾರೂ ಕೊಡಲಾಗದಷ್ಟು ಅನುದಾನವನ್ನು ಜಿಲ್ಲೆಗೆ ನೀಡಿದ್ದೇವೆ. ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಬೆಂಬಲಿಸುವರೆಂಬ ವಿಶ್ವಾಸವೂ ಇದೆ.
Related Articles
ನಿಖೀಲ್: ರಾಜಕೀಯ ನನಗೆ ಹೊಸದು. ವಯಸ್ಸು ಚಿಕ್ಕದಿರಬಹುದು. ಮೊದಲ ಪ್ರವೇಶದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಕೆಳಮಟ್ಟಕ್ಕೆ ಇಳಿದು ಜನರ ಪರಿಸ್ಥಿತಿಯನ್ನು ಅರಿಯುವ ಅವಕಾಶ ಇದರಿಂದ ನನಗೆ ಸಿಕ್ಕಿದೆ. ಜನಸಾಮಾನ್ಯರ ಸಮಸ್ಯೆಗಳೇನು, ರೈತರ ಸಮಸ್ಯೆಗಳೇನು ಎಂದು ತಿಳಿಯುವುದಕ್ಕೆ ಸಾಧ್ಯವಾಗಿದೆ. ಇದೊಂದು ವಿಶಿಷ್ಟ ಅನುಭವ. ಒಳ್ಳೆಯ ರಾಜಕಾರಣ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದು, ಅದಕ್ಕಾಗಿ ಚುನಾವಣೆಯಲ್ಲಿ ಆಶೀರ್ವಾದ ಕೇಳುತ್ತಿದ್ದೇನೆ.
Advertisement
* ಚುನಾವಣೆಯಲ್ಲಿ ಗೆಲುವಿನ ವಿಶ್ವಾಸವಿದೆಯೇ?ನಿಖೀಲ್: ಹಂಡ್ರೆಡ್ ಪರ್ಸೆಂಟ್ ಇದೆ. ನನ್ನ ಸ್ಪರ್ಧೆಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಶಾಸಕರು ನನ್ನ ಪರವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು ನನ್ನ ಗೆಲುವಿಗೆ ಪಣ ತೊಟ್ಟಿದ್ದಾರೆ. ನನ್ನ ತಾತ ಹಾಗೂ ತಂದೆಯವರು ಜಿಲ್ಲೆಗೆ ನೀಡಿರುವ ಕೊಡುಗೆಗಳು ನನಗೆ ಬೆನ್ನೆಲುಬಾಗಿದೆ. ಅವರಂತೆಯೇ ನನಗೂ ಜನಸೇವಕನಾಗಬೇಕೆಂಬ ಹಂಬಲವಿದೆ. ಜನರ ಮಧ್ಯದಲ್ಲಿದ್ದು ಕೆಲಸ ಮಾಡುವ ಉತ್ಕಟ ಆಕಾಂಕ್ಷೆ ಹೊಂದಿರುವೆ. ಅದಕ್ಕಾಗಿ ಜನರು ನನ್ನ ಕೈ ಹಿಡಿಯುವರೆಂಬ ಅಚಲವಾದ ವಿಶ್ವಾಸವಿದೆ. ಉತ್ತಮ ರಾಜಕಾರಣಿಯಾಗಲು ಬಂದಿರುವ ನನ್ನನ್ನು ಜನರು ಸ್ವೀಕರಿಸುತ್ತಾರೆಂಬ ನಂಬಿಕೆ ಬಲವಾಗಿದೆ.