Advertisement

ಗುಪ್ತಚರ ವರದಿ ಅಷ್ಟೊಂದು ಸಸ್ತಾ ಆಗೋಗಿದೆಯೇ?;ಸುರೇಶ್‌ ಕುಮಾರ್‌

12:38 PM Nov 21, 2018 | Team Udayavani |

 ಬೆಂಗಳೂರು: ಗುಪ್ತಚರ ವರದಿ ಕುರಿತಾಗಿ ನಿಖಿಲ್‌ ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ. 

Advertisement

ಸುರೇಶ್‌ ಕುಮಾರ್‌ ಅವರು ನಿಖಿಲ್‌ ನೀಡಿರುವ ಹೇಳಿಕೆಯ ವಿಡಿಯೋ ಟ್ವೀಟ್‌ ಮಾಡಿ ಮುಖ್ಯಮಂತ್ರಿಗಳ ಸ್ಪಷ್ಟನೆ ಕೋರಿದ್ದಾರೆ. 

‘ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ “ಅಧಿಕಾರ” ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು’ಎಂದು ಬರೆದಿದ್ದಾರೆ. 

 ‘ಮುಖ್ಯಮಂತ್ರಿಯೇ ? ಗ್ರಹ ಮಂತ್ರಿಯೇ? ಅಪ್ಪ ಮಕ್ಕಳ ರಾಜಕಾರಣದಲ್ಲಿ ಕಾನೂನು ಕಾಲ ಕಸ’ ಎಂದು ವಿಡಿಯೋದಲ್ಲಿ  ಬರೆಯಲಾಗಿದೆ. 

Advertisement

ಬೆಳಗಾವಿ ರೈತರ ಉಗ್ರ ಪ್ರತಿಭಟನೆಯ ಕುರಿತು ಮಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ನಿಖಿಲ್‌ ‘ನಮಗೆ ಬಂದಂತಹ ಇಂಟಲಿಜೆನ್ಸ್‌ ಪ್ರಕಾರ’ ಎಂದಿದ್ದರು. ಈ ಹೇಳಿಕೆ ವಿರುದ್ಧ  ಸುರೇಶ್‌ ಕುಮಾರ್‌ ಪ್ರಶ್ನೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next