Advertisement
ಮಂಗಳವಾರ ಪೇಟೆಯ ರುದ್ರಾಕ್ಷಿಮಠದಲ್ಲಿ ಗುರುವಾರ ನಡೆದ ಶ್ರೀ ನಿಜಗುಣ ಶಿವಯೋಗಿಗಳ 71ನೇ ಜಯಂತ್ಯುತ್ಸವ ಹಾಗೂ ನಿಜಗುಣರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ದೇಹಕ್ಕೆ ಸಾವಿದೆ. ಆದರೆ ಜ್ಞಾನಕ್ಕೆ ಎಂದಿಗೂ ಸಾವು ಇಲ್ಲ ಎನ್ನುವುದನ್ನು ಶರಣರು ಹೇಳಿದ್ದಾರೆ. ಕನ್ನಡಕ್ಕೆ ಷಟ್ ಶಾಸ್ತ್ರಗಳನ್ನು ಬರೆದವರು ನಿಜಗುಣ ಶಿವಯೋಗಿಗಳು. ಹಲವಾರು ತತ್ವಜ್ಞಾನಿಗಳು ಬಂದು ಹೋಗಿದ್ದಾರೆ, ಆದರೆ ಜ್ಞಾನದ ಸಂಪತ್ತು ಎಂದರೆ ಅದು ನಿಜಗುಣ ಶಿವಯೋಗಿಗಳು ಮಾತ್ರ ಎಂದರು.
Related Articles
Advertisement
ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಲಿಂಗಯ್ಯನವರ ಗಲಗಲಿಮಠ ಉಪನ್ಯಾಸ ನೀಡಿದರು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಉಮಾ ಪಂಚಾಂಗಮಠ, ಪ್ರೊ| ಎಸ್.ಕೆ. ಜಂಗ್ಲೆಪ್ಪಗೌಡ್ರ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಹಂದಿಗುಂದ ಶ್ರೀಗಳು, ಗುಳೇದಗುಡ್ಡ ಒಪ್ಪತ್ತೇಶ್ವರ ಶ್ರೀಗಳು, ಪ್ರೊ| ಕೆ.ಎಸ್. ಕೌಜಲಗಿ ಮೊದಲಾದವರು ಇದ್ದರು. ಶ್ರೀ ನಿಜಗುಣ ಶಿವಯೋಗಿಗಳ ತೊಟ್ಟಿಲೋತ್ಸವ ನಡೆಯಿತು. ನಂತರ ಓಣಿಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.