ನವದೆಹಲಿ: ಇತ್ತೀಚೆಗೆ ಸಿಂಘು ಗಡಿಯಲ್ಲಿ ಸಿಖ್ ದಲಿತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿ ಸುದ್ದಿಯಲ್ಲಿದ್ದ ನಿಹಾಂಗ್ ಗುಂಪಿನ ಮುಖ್ಯಸ್ಥ ಇದೀಗ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
2 ತಿಂಗಳ ಹಿಂದೆ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್‌ರನ್ನು ಭೇಟಿಯಾಗಿದ್ದ ಫೋಟೋ ಹಂಚಿಕೊಂಡಿರುವ ಅವರು, ರೈತ ಹೋರಾಟದಿಂದ ಹಿಂದೆ ಸರಿಯಲು ಕೇಂದ್ರ ಸರ್ಕಾರ ಹಣ ನೀಡುವುದಾಗಿ ಹೇಳಿತ್ತು ಎಂದು ಹೇಳಿದ್ದಾರೆ.
ಸಿಂಘು ಗಡಿಯಿಂದ ಹಿಂದೆ ಹೋಗಲು ನನಗೆ 10 ಲಕ್ಷ ರೂಪಾಯಿ ಕೊಡುವುದಾಗಿ ಹೇಳಲಾಗಿತ್ತು. ಹಾಗೆಯೇ ಪಕ್ಷಕ್ಕೆ 1 ಲಕ್ಷ ರೂ. ಕೊಡುವುದಾಗಿಯೂ ತಿಳಿಸಲಾಗಿತ್ತು. ಆದರೆ ನಾನು ಅದನ್ನು ಸ್ವೀಕರಿಸಿರಲಿಲ್ಲಿ. ಸಿಂಘು ಗಡಿಯಿಂದ ಹಿಂದೆಸರಿಯುವ ಬಗ್ಗೆ ಅ.27ರಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ನಿಹಾಂಗ್ ಗುಂಪಿನ ಮುಖ್ಯಸ್ಥ ಅಮನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು
ಫೋಟೋದಲ್ಲಿ ಪಂಜಾಬ್‌ನ ಮಾಜಿ ಪೊಲೀಸ್ ಅಧಿಕಾರಿ ಗುರ್ಮೀತ್ ಸಿಂಗ್ ಪಿಂಕಿಯೂ ಇದ್ದು, ಅವರು “ಅಮನ್ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ನಿಜ, ಆದರೆ ಅಲ್ಲಿ ಹಣದ ಬಗ್ಗೆ ಯಾವುದೇ ಮಾತುಕತೆಯಾಗಿರಲಿಲ್ಲ’ ಎಂದು ಹೇಳಿದ್ದಾರೆ.