Advertisement

Gurdwara: ನಿಹಾಂಗ್ ಗುಂಪಿನಿಂದ ಗುಂಡಿನ ದಾಳಿ, ಓರ್ವ ಪೊಲೀಸ್ ಅಧಿಕಾರಿ ಮೃತ್ಯು, 3 ಗಾಯ

12:06 PM Nov 23, 2023 | sudhir |

ಚಂಡೀಗಢ: ಪಂಜಾಬ್‌ನ ಕಪುರ್ತಲಾದಲ್ಲಿ ನಿಹಾಂಗ್ ಸಿಖ್ಖರು ಮತ್ತು ಪೊಲೀಸರ ನಡುವೇ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

Advertisement

ಗುರುದ್ವಾರದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ನಿಹಾಂಗ್‌ಗಳು ಗುರುದ್ವಾರ ಅಕಲ್‌ಪುರ ಬುಂಗಾದೊಳಗೆ ಪ್ರವೇಶಿಸಿ ಆವರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಗುರುದ್ವಾರವನ್ನು ಅತಿಕ್ರಮಿಸಿದ ಆರೋಪದ ಮೇಲೆ ಪೊಲೀಸರು ನಿಹಾಂಗ್ ಪಂಗಡದ 10 ಜನರನ್ನು ಬಂಧಿಸಿದ್ದಾರೆ, ಕಾರ್ಯಾಚರಣೆಯನ್ನು ಮುಂದುವರೆಸಿದ ಪೊಲೀಸರು ಆವರಣವನ್ನು ತೆರವುಗೊಳಿಸಲು ಹೋದ ವೇಳೆ ನಿಹಾಂಗ್‍ಗಳಲ್ಲಿ ಓರ್ವ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ.

ನಿಹಾಂಗ್‌ಗಳು ಅವರ ಮೇಲೆ ಗುಂಡು ಹಾರಿಸಿದಾಗ ಪೊಲೀಸರು ರಸ್ತೆಯಲ್ಲಿ ನಿಂತಿದ್ದರು ಎಂದು ಕಪುರ್ತಲಾ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಬೀರ್ ಸಿಂಗ್ ಹುಂದಾಲ್ ಪಿಟಿಐಗೆ ತಿಳಿಸಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆಯ ಬಳಿಕ ಕನಿಷ್ಠ 30 ನಿಹಾಂಗ್‌ಗಳು ಇನ್ನೂ ಗುರುದ್ವಾರದೊಳಗೆ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗುರುದ್ವಾರದ ಸ್ವಾಧೀನಕ್ಕೆ ಸಂಬಂಧಿಸಿದಂತೆ ನಿಹಾಂಗ್‌ಗಳ ಎರಡು ಬಣಗಳ ನಡುವೆ ವಿವಾದವಿತ್ತು ಎಂದು ಹೇಳಲಾಗಿದೆ. ಅದರಂತೆ ಮಂಗಳವಾರ ಬಾಬಾ ಮನ್ ಸಿಂಗ್ ನೇತೃತ್ವದ ಬಣದ ನಿಷ್ಠೆಯಿಂದಾಗಿ ಕೆಲವು ನಿಹಾಂಗ್‌ಗಳು ಗುರುದ್ವಾರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು ಈ ವೇಳೆ ಬಾಬಾ ಬುಧಾ ಗುಂಪಿನ ಸಂತ ಬಲ್ಬೀರ್ ಸಿಂಗ್ ನೇತೃತ್ವದ ಇತರ ಬಣದ ಇಬ್ಬರು ನಿಹಾಂಗ್‌ಗಳನ್ನು ಥಳಿಸಿದ್ದಾರೆ. ಇದೆ ವಿಚಾರವಾಗಿ ಬುಧವಾರ ಬುಸ್ಸೋವಾಲ್ ಗ್ರಾಮದಲ್ಲಿ ಬಾಬಾ ಬುಧಾ ದಳದ ಜನರ ಗುಂಪಿನ ಮೇಲೆ ಹಲ್ಲೆ ನಡೆಸಿ ಸಂಘರ್ಷ ಜೋರಾಗಿದೆ.

ಇದನ್ನೂ ಓದಿ: Tragedy: 350 ರೂ. ಗೋಸ್ಕರ 18 ವರ್ಷದ ಯುವಕನನ್ನು ಹತ್ಯೆಗೈದು ನೃತ್ಯ ಮಾಡಿದ 16 ವರ್ಷದ ಬಾಲಕ

Advertisement

Udayavani is now on Telegram. Click here to join our channel and stay updated with the latest news.

Next