ಒಬ್ಬ ಉದಯೋನ್ಮುಖ ನಿರ್ದೇಶಕಿಯ ಪರಿಚಯ. ಮೂಲತಃ ಉಡುಪಿಯವವರಾದ ನವ್ಯಾ ನಾಯಕ್ ಅವರು ಕನ್ನಡ ಕಿರುಚಿತ್ರ ನಿಗೂಢ ಮೌನದ ನಿರ್ದೇಶಕಿ. ಇದು ಇವರ ಪ್ರಪ್ರಥಮ ಕಿರುಚಿತ್ರ. ಇವರು ಸಮಾಜದ ಬಗ್ಗೆ ಒಳ್ಳೆಯ ಕಳ ಕಳಿಯನ್ನು ಇಟ್ಟು ಕೊಂಡಿದ್ದಾರೆ. ಒಬ್ಬ ಶಿಕ್ಷಕಿ ಆಗಿದ್ದ ಇವರು ತನ್ಮೂಲಕ ಒಂದು ವಿನೂತನ ಬದಲಾವಣೆ ಈ ಸಮಾಜದಲ್ಲಿ ಬರಲಿ ಎಂದು ನಾಲ್ಕೈದು ವರ್ಷಗಳಿಂದ ಬಹಳ ಆಸಕ್ತಿಯಿಂದ ಒಂದು ಸಮುದಾಯದ ಬದುಕು ಹಾಗೂ ಜೀವನ ಶೈಲಿಯ ಬಗ್ಗೆ ರೀಸರ್ಚ್ ಮಾಡಿ , ಆ ಸಮುದಾಯದ ಜೊತೆ ಕಳೆದ ಅನುಭವಗಳನ್ನು ಜೊತೆಗೂಡಿಸಿ ಈ ಕಿರುಚಿತ್ರದ ಮೂಲಕ ಸಮಾಜಕ್ಕೆ ಒಂದು ವಿಶೇಷ , ಸೂಕ್ಷ್ಮ, ಒಳ್ಳೆಯ ಸಂದೇಶವೊಂದನ್ನು ಕೊಟ್ಟಿದ್ದಾರೆ.ಈ ಕಿರುಚಿತ್ರ ಸಹಜವಾಗಿ ಮೂಡಿ ಬರಲು ಇನ್ನೊಂದು ಮುಖ್ಯ ಕಾರಣ ಈ ಚಿತ್ರದ ನಾಯಕಿ ನಟಿಯ ಆಯ್ಕೆ. ಈ ಚಿತ್ರಕ್ಕೆ ನಿರ್ದೇಶಕಿ ನವ್ಯಾ ನಾಯಕ್ ಈ ಸಮುದಾಯದ 50 ಕ್ಕೂ ಹೆಚ್ಚು ವ್ಯಕ್ತಿಗಳ ಆಡಿಶನ್ಗಳನ್ನು ಮಾಡಿದ್ದಾರೆ. ಇವರು ಗೂಗಲ್ ಯು ಟ್ಯೂಬ್ ಮುಖಾಂತರ ನಿರ್ದೇಶನ ಕಲಿತು ಅವರ ಸ್ವಂತ ದೃಷ್ಟಿ ಕೋನದಿಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಸಾಹಿತ್ಯ, ರಾಗ ಸಂಯೋಜನೆ, ಸಂಭಾಷಣೆ, ಸಬ್ ಟೈಟಲ್ ಕೂಡ ಮಾಡಿದ ಕೀರ್ತಿ ನವ್ಯಾರವರಿಗೆ ಸಲ್ಲುತ್ತದೆ.
“ನಿಗೂಢ ಮೌನ ಪಾಲಿಸಿ” ಎಂಬ ಈ ಚಿತ್ರದ ಹಾಡಂತೂ ಜನರ ಮನಸ್ಸು ಹೃದಯ ಮೀಟಿ ಕಂಗಳಲ್ಲಿ ಕಂಬನಿ ಮಿಡಿಸಿದೆ. ಈ ಕಿರು ಚಿತ್ರ ಅವರ ಹೋಂ ಪ್ರೊಡಕ್ಷನ್ ಆಗಿರುವ ನಾಯಕ್ ಬ್ರದರ್ಸ್ ಎಂಬ ಸೋಶಿಯಲ್ ಐಸ್ ಮೂಲಕ ಮೂಡಿ ಬಂದಿದೆ…. ,”ಇವೆಲ್ಲ ಸಾಯಿ ಬಾಬಾ ಮತ್ತು ಶನಿ ದೇವರ ಆಶೀರ್ವಾದ ನನ್ನ ತಾಯಿ ಹಾಗೂ ನನ್ನ ಯಜಮಾನರಾದ ಜನಾರ್ದನ ನಾಯಕ್ ಅವರ ಅತ್ಯುತ್ತಮ ಸಹಕಾರದಿಂದ ಮತ್ತೆ ಒಳ್ಳೆಯ ತಂಡ ಸಿಕ್ಕಿರೋದ್ರಿಂದ ಚಿತ್ರ ಮಾಡಲು ಸಹಾಯ ಆಯ್ತು “ಎಂದು ಅವರು ಹೇಳಿದ್ದಾರೆ.