Advertisement

ಅವೈಜ್ಞಾನಿಕ ಕಸ ವಿಲೇವಾರಿ ತಪ್ಪಿಸಲು ರಾತ್ರಿ ಕಾವಲು

03:50 PM Aug 07, 2019 | Team Udayavani |

ತುಮಕೂರು: ಅವೈಜ್ಞಾನಿಕ ಕಸ ವಿಲೇವಾರಿ ತಪ್ಪಿಸಲು ನಗರದ ವಸತಿ ಪ್ರದೇಶಗಳಲ್ಲಿ ಪಾಲಿಕೆ ಸಿಬ್ಬಂದಿ ರಾತ್ರಿ-ಹಗಲು ಪಾಳಿ ಯಲ್ಲಿ ಕಾರ್ಯ ನಿರ್ವಹಿಸಿ ಕಸ ಹಾಕುವವರನ್ನು ಹಿಡಿದು ಕೆಲವರಿಗೆ ತಿಳಿವಳಿಕೆ ನೀಡಿ, ಕೆಲವರಿಗೆ ದಂಡ ವಿಧಿಸಲಾ ಗಿದೆ ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ತಿಳಿಸಿ ದ್ದಾರೆ. ಪಾಲಿಕೆ ಕಸ ವಿಲೇವಾರಿ ಕುರಿತು ಸಾರ್ವ ಜನಿಕರಿಗೆ ಅರಿವು ಮೂಡಿಸಿ ನಗರ ಅಂದಗೊಳಿಸುವ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಕಸ ಹಾಕುವ ಸುಮಾರು 80ಕ್ಕೂ ಹೆಚ್ಚು ಕಪ್ಪುಚುಕ್ಕೆ ಪ್ರದೇಶ ಗುರುತಿಸಿ ಆಕರ್ಷಕವಾಗಿ ಕಾಣುವಂತೆ ರೂಪಾಂತರಗೊಳಿಸುವ ಕಾರ್ಯ ಮಾಡುತ್ತಿದೆ. ಪಾಲಿಕೆ ಪೌರ ಕಾರ್ಮಿಕರು, ದಫೇದಾರ್‌ಗಳು, ಸೂಪರ್‌ವೈಸರ್, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು, ಆರೋಗ್ಯ ಅಧಿಕಾರಿಗಳ ಶ್ರಮದಿಂದ ಯಾವುದೇ ಖರ್ಚಿಲ್ಲದೆ ಈ ರೂಪಾಂತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Advertisement

ರೂಪಾಂತರಗೊಳಿಸಿದ ಸ್ಥಳಗಳ ವಿವರ: ಪಾಲಿಕೆ ವ್ಯಾಪ್ತಿಯ 2ನೇ ವಾರ್ಡ್‌ನ ಸತ್ಯಮಂಗಲ ರಸ್ತೆ, 3ನೇ ವಾರ್ಡ್‌ನ ಅರಳೀಮರದಪಾಳ್ಯ ರಸ್ತೆ, 4ನೇ ವಾರ್ಡ್‌ನ ವಾಸವಿ ಕಲ್ಯಾಣ ಮಂಟಪ, ಕವಿತಾ ಮೆಟಲ್, ಸಂತೇಪೇಟೆ ಮುಖ್ಯ ರಸ್ತೆ, ಮಸೀದಿ ಬಳಿ ಹಾಗೂ ಜೈನ್‌ ಟೆಂಪಲ್ ರಸ್ತೆ, 5ನೇ ವಾರ್ಡ್‌ನ ಪಾಂಡು ಪಾನಿಪೂರಿ ಪಕ್ಕದ ರಸ್ತೆ, ಪೊಲೀಸ್‌ ಕ್ವಾಟ್ರಸ್‌, ಕಾರಂಜಿ ದೇವಸ್ಥಾನ, ಮಾರುತಿ ಪ್ಲಾಜಾ ಹಿಂಭಾಗ, ವಿವೇಕಾನಂದ ರಸ್ತೆ, ಕೃಷ್ಣ ಚಿತ್ರಮಂದಿರದ ಎದುರು, 6ನೇ ವಾರ್ಡ್‌ನ ಭೀಮಸಂದ್ರ ಹಾಗೂ ಬೆಳ್ಳಾವಿ ರಸ್ತೆ, 7ನೇ ವಾರ್ಡ್‌ನ ಜಿ.ಸಿ.ಆರ್‌.ಕಾಲೋನಿ, ಅಗ್ರಹಾರ ಮುಖ್ಯರಸ್ತೆ, ಬಿ.ಎಚ್.ರಸ್ತೆ, ಗಾರ್ಡನ್‌ ರಸ್ತೆ, ತೋಟದಸಾಲು ರಸ್ತೆ ಬಳಿ, 8ನೇ ವಾರ್ಡ್‌ನ ಮಾರುತಿ ಟಾಕೀಸ್‌ ಮಧ್ಯದ ರಸ್ತೆ, 11ನೇ ವಾರ್ಡ್‌ನ ಸಮುದಾಯ ಭವನ, ಮೆಳೇ ಕೋಟೆ, ಟೂಡಾ ಲೇಔಟ್, ರಾಜೀವ್‌ಗಾಂಧಿ ನಗರ, 12ನೇ ವಾರ್ಡ್‌ನ ಇಸ್ರಾ ಶಾದಿ ಮಹಲ್, ಗಣಪತಿ ದೇವಸ್ಥಾನದ ರಸ್ತೆ, ಮೆಳೇಕೋಟೆ ರಸ್ತೆ, 7ನೇ ಕ್ರಾಸ್‌ ಶಾದಿ ಮಹಲ್ ರಸ್ತೆ, ಹಣ್ಣಿ ಅಂಗಡಿ, 5ನೇ ಮುಖ್ಯರಸ್ತೆ, ನರಸಿಂಹಸ್ವಾಮಿ ದೇವಸ್ಥಾನದ ರಸ್ತೆ, ವೀರಭದ್ರಸ್ವಾಮಿ ದೇವಸ್ಥಾನದ ರಸ್ತೆ, ನಜರ ಬಾದ್‌ ರೈಲ್ವೆ ಹಳಿ ಪಕ್ಕದ ರಸ್ತೆ, 13ನೇ ವಾರ್ಡ್‌ನ ರಾಜಣ್ಣ ಅಂಗಡಿ ಮುಂಭಾಗ, 7ನೇ ಕ್ರಾಸ್‌, ಟಿಪ್ಪುನಗರ, 14ನೇ ವಾರ್ಡ್‌ನ ರಂಗಮಂದಿರ, ಕ್ಯಾಂಟೀನ್‌ ರಸ್ತೆ, ಮೀನು ಮಾರ್ಕೆಟ್ ರಸ್ತೆ, 15ನೇ ವಾರ್ಡ್‌ನ ಗಾಂಧಿನಗರ, ಸೆಂಟ್ ಮೆರೀಸ್‌ ಶಾಲೆ, ಟೌನ್‌ಹಾಲ್, ರೈಲ್ವೇಸ್ಟೇಷನ್‌, ಸಿಎಸ್‌ಐ ಲೇಔಟ್, ಎಸ್‌.ಎಸ್‌. ಪುರಂ, 15ನೇ ಕ್ರಾಸ್‌, 3ನೇ ಕ್ರಾಸ್‌, 16ನೇ ವಾರ್ಡ್‌ನ ಕೆ.ಆರ್‌.ಬಡಾವಣೆ, ಕರಿಬಸವ ದೇವಸ್ಥಾನ, ಕೆಇಬಿ ಕಾಂಪೌಂಡ್‌, ಬಾರ್ಲೈನ್‌ ಓವರ್‌ಹೆಡ್‌ ಟ್ಯಾಂಕ್‌, 17ನೇ ವಾರ್ಡಿನ ಬಚ್ಚೆಬೀಳು, ಪದ್ಮಪ್ರಿಯ ಮುಂಭಾಗ.

ಸಿದ್ದಲಿಂಗೇಗೌಡರ ಮನೆ ಮುಂಭಾಗ, ಹುಣಸೇ ಮರದ ರಸ್ತೆ, 19ನೇ ವಾರ್ಡ್‌ನ ಹೊರಪೇಟೆ ಮುಖ್ಯರಸ್ತೆ, ಅಮಾನಿಕೆರೆ ಮುಖ್ಯರಸ್ತೆ, 20 ನೇ ವಾರ್ಡ್‌ನ ಬೈಲಾಂಜನೇಯಸ್ವಾಮಿ ದೇವಸ್ಥಾನದ ಮುಖ್ಯರಸ್ತೆ, 21ನೇ ವಾರ್ಡ್‌ನ ಕುವೆಂಪುನಗರ ಲಿಂಕ್‌ ರಸ್ತೆ, 22ನೇ ವಾರ್ಡ್‌ನ ವಿವೇಕಾನಂದ ಶಾಲೆ ಬಳಿ, 24ನೇ ವಾರ್ಡ್‌ ನಮ್ಮೂರ ಆಹಾರದ ಹತ್ತಿರ, 25ನೇ ವಾರ್ಡ್‌ನ ಉರ್ದು ಶಾಲೆ ಮುಂಭಾಗ ಮತ್ತಿತರ ವಾರ್ಡ್‌ಗಳ ಪ್ರದೇಶ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next