Advertisement

ಅಗತ್ಯವಿದ್ದರೆ ನೈಟ್‌ ಕರ್ಫ್ಯೂ ಜಾರಿ ಮಾಡಿ : ಕೇಂದ್ರ ಸೂಚನೆ

10:02 AM Dec 22, 2021 | Team Udayavani |

ನವದೆಹಲಿ/ವಾಷಿಂಗ್ಟನ್‌ : “ಅಗತ್ಯ ಬಿದ್ದರೆ ರಾತ್ರಿ ಕರ್ಫ್ಯೂ ಜಾರಿ ಮಾಡಿ, ಕೊರೊನಾ ವಾರ್‌ ರೂಮ್‌ ಗಳನ್ನು ಚುರುಕುಗೊಳಿಸಿ, ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳನ್ನು ಸಿದ್ಧಗೊಳಿಸಿ’ ಹೀಗೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

Advertisement

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ರಾಜ್ಯಗಳ ಮುಖ್ಯ ಕಾರ್ಯ  ದರ್ಶಿ ಗಳಿಗೆ ಬರೆದಿರುವ ಪತ್ರದಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಜಿಲ್ಲಾ ಮಟ್ಟ, ಸ್ಥಳೀಯ ಮಟ್ಟದಲ್ಲಿ ಕೂಡ ಕಂಟೈನ್‌ಮೆಂಟ್‌ ವಲಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಸೂಚಿಸಿದ್ದಾರೆ. ಡೆಲ್ಟಾಗೆ ಹೋಲಿಕೆ ಮಾಡಿದರೆ ಒಮಿಕ್ರಾನ್‌ ಮೂರು ಪಟ್ಟು ಹೆಚ್ಚು ಹರಡುತ್ತದೆ ಎಂದಿದ್ದಾರೆ.

ಸದ್ಯಕ್ಕೆ ಬೇಡ: ದೇಶದಲ್ಲಿ ಸದ್ಯಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲ. ಅಂಥ ಪರಿಸ್ಥಿತಿಯೂ ಉಂಟಾಗಿಲ್ಲವೆಂದು ರಾಷ್ಟ್ರೀಯ ತಾಂತ್ರಿಕ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.

200ಕ್ಕೂ ಹೆಚ್ಚು ಕೇಸು: ದೇಶದಲ್ಲಿ ಒಟ್ಟು ಒಮಿಕ್ರಾನ್‌ ಕೇಸುಗಳ ಸಂಖ್ಯೆ 200 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್‌ ಮಾಡಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ 65, ದೆಹಲಿಯಲ್ಲಿ ತಲಾ 54, ಕರ್ನಾಟಕದಲ್ಲಿ 19 ಕೇಸುಗಳು ದೃಢಪಟ್ಟಿವೆ.

ಅಮೆರಿಕದಲ್ಲಿ ಮೊದಲ ಸಾವು

Advertisement

ಅಮೆರಿಕದ ಟೆಕ್ಸಸ್‌ನಲ್ಲಿ ಇದೇ ಮೊದಲ ಬಾರಿಗೆ ಒಮಿಕ್ರಾನ್‌ನಿಂದಾಗಿ ಮೊದಲ ಸಾವಿನ ಪ್ರಕರಣ ದೃಢಪಟ್ಟಿದೆ. ಕಳೆದ ವಾರ ಪತ್ತೆಯಾದ ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ.73 ಹೊಸ ರೂಪಾಂತರಿಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ನಡುವೆ, ಕೊರೊನಾ ದೃಢಪಟ್ಟ ಬಳಿಕ ಅಮೆರಿಕದ ಜನಸಂಖ್ಯೆ ಬೆಳೆಯುವ ಪ್ರಮಾಣ ಕುಸಿದಿದೆ. 2020ರ ಜುಲೈನಿಂದ ಈ ವರ್ಷದ ಜುಲೈ ವರೆಗೆ ಶೇ.0.1ರ ಪ್ರಮಾಣದಲ್ಲಿ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next