Advertisement

ಉಡುಪಿ ಜಿಲ್ಲೆಯಲ್ಲಿ ಜ.19 ರವರೆಗೆ ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿ : ಡಿಸಿ ಸ್ಪಷ್ಟನೆ

05:57 PM Jan 11, 2022 | Team Udayavani |

ಉಡುಪಿ : ಒಮಿಕ್ರಾನ್ ವೈರಾಣುವಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲು ಜನವರಿ 4 ರಂದು ಸರ್ಕಾರ ಆದೇಶ ಹೊರಡಿಸಿದ್ದು ಅದರಂತೆ ಜನವರಿ 5 ರ ಅಪರಾಹ್ನ 10.00 ರಿಂದ ಜನವರಿ 19 ರ ಪೂರ್ವಾಹ್ನ 5.00 ರ ವರೆಗೆ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿಯಲ್ಲಿರುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಸ್ಪಷ್ಟಪಡಿಸಿದ್ದಾರೆ.

Advertisement

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ವಾರಂತ್ಯ ಕರ್ಫ್ಯೂ ವನ್ನು ರದ್ದುಪಡಿಸಿದ್ದಾರೆ ಎಂದು ದಿನಾಂಕ 10.09.2021 ರ ಸುದ್ದಿ ಹಾಗೂ ವಿಡಿಯೋ ತುಣುಕನ್ನು ಹರಿಯಬಿಟ್ಟಿರುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ.

ಇದು ಒಂದು ಸುಳ್ಳು ವದಂತಿಯಾಗಿದ್ದು, ಜಿಲ್ಲೆಯಲ್ಲಿ ಸರಕಾರದ ಆದೇಶದಂತೆ ದಿನಾಂಕ: 05.01.2022 ರ ಅಪರಾಹ್ನ 10.00 ರಿಂದ ದಿನಾಂಕ: 19.01.2022 ರ ಪೂರ್ವಾಹ್ನ 5.00 ರ ವರೆಗೆ ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಹಾಗೂ ವಾರಂತ್ಯ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಹಿರಿಯಡಕ ಜೈಲಿನಲ್ಲಿ ಇಸಿಜಿ ಟೆಲಿಮೆಡಿಸಿನ್‌: ರಾಜ್ಯದಲ್ಲೇ ಪ್ರಥಮ

Advertisement

Udayavani is now on Telegram. Click here to join our channel and stay updated with the latest news.

Next