Advertisement

ಮುಂಬಯಿ : 6 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಹಿತ ನೈಜೀರಿಯನ್ ಪ್ರಜೆಯ ಬಂಧನ

07:56 PM Nov 11, 2021 | Team Udayavani |

ಮುಂಬಯಿ : ಮುಂಬೈ ಪೊಲೀಸ್‌ನ ಆಂಟಿ ನಾರ್ಕೋಟಿಕ್ಸ್ ಸೆಲ್(ಎಎನ್ ಸಿ) 36 ವರ್ಷದ ನೈಜೀರಿಯನ್ ವ್ಯಕ್ತಿಯನ್ನು 6 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಮನರಂಜನಾ ಔಷಧವಾದ ಮೆಟಾಕ್ವಾಲೋನ್‌ನೊಂದಿಗೆ ಬುಧವಾರ ಬಂಧಿಸಿದ್ದಾರೆ.

Advertisement

ಇನುಸಾ ಗಾಡ್ವಿನ್ ಅಲಿಯಾಸ್ ಜಾನ್‌ನನ್ನು ಉಪನಗರ ಗೋರೆಗಾಂವ್‌ನ ಅರೆ ರಸ್ತೆಯಲ್ಲಿ ಬುಧವಾರ ಬಂಧಿಸಲಾಯಿತು, ಡ್ರಗ್ ತಲುಪಿಸಲು ಆಗಮಿಸುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಎ ಎನ್ ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಡ್ವಿನ್ ವಿರುದ್ಧ ಈಗಾಗಲೇ ಎಎನ್‌ಸಿಯ ಘಾಟ್‌ಕೋಪರ್, ಆಜಾದ್ ಮೈದಾನ್, ನಾಗ್ಪುರದ ಸೋನೆಗಾಂವ್ ಪೊಲೀಸ್ ಠಾಣೆ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಉಪ ಕಾಯಿದೆಗಳ ಆಕ್ಟ್ ಅಡಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯವು ಆತನ ಪಾಸ್ಪೋರ್ಟ್ ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಬಂಧಿತನ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next