ನೈಜೀರಿಯಾ: ಆಫ್ರಿಕಾದ ರಾಷ್ಟ್ರಗಳೂ ಈಗ ಲಾಕ್‌ಡೌನ್ ಸಡಿಲಿಕೆಗೆ ಮುಂದಾಗಿವೆ. ಘಾನಾ, ದ.ಆಫ್ರಿಕಾದ ಸೇರಿದಂತೆ ಹಲವು ರಾಷ್ಟ್ರಗಳ ಬಳಿಕ ನೈಜೀರಿಯಾಯಾ ಸಹ ಅಬುಜಾ ಮತ್ತು ಅತಿದೊಡ್ಡ ನಗರವಾದ ಲಾಗೋಸ್ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಿಸಿವೆ.
ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಮಧ್ಯಾಹ್ನದವರೆಗೆ ತೆರೆಯಲು ಸೂಚಿಸಿದ್ದು,
ಸೀಮಿತ ವರ್ಗದಲ್ಲಿ ಕಾರ್ಮಿಕರನ್ನು ಬಳಸಿ ಕಾರ್ಯಾಚರಿಸಲು ಹೇಳಿದೆ. ಸಾರ್ವಜನಿಕ ಕಾರ್ಯಕ್ರಮಗಳು, ಶಾಲೆ ಕಾಲೇಜುಗಳು, ಧಾರ್ಮಿಕ ಮಂದಿರಗಳಗೆ ಅನುಮತಿ ನೀಡಿಲ್ಲ.
ಸಾರ್ವಜನಿಕವಾಗಿ ಸಂಚಾರ ನಡೆಸುವಾಗ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಜನರು ಸಾಮಾಜಿಕ ಅಂತರ ನಿಯಮ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ರಾತ್ರಿಯ ವೇಳೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿದೆ.
ಲಾಗೋಸ್ ಸೋಂಕಿನ ಕೇಂದ್ರ ಬಿಂದುವಾಗಿದ್ದು, 1,068 ಪ್ರಕರಣಗಳು ದೃಢಪಟ್ಟಿದ್ದರೆ, ಉತ್ತರದ ಕ್ಯಾನೊ ರಾಜ್ಯದಲ್ಲಿ ಒಟ್ಟು 313 ಪ್ರಕರಣಗಳು ದಾಖಲಾಗಿದೆ. ಕಳೆದ ವಾರದಲ್ಲಿ ದೇಶದಲ್ಲಿ ಏಕಾಏಕಿ ಸೋಂಕಿನ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದ್ದು, ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 2,558 ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 87 ಮಂದಿ ಬಲಿಯಾಗಿದ್ದಾರೆ.