ಕೆ.ಆರ್.ಪುರ: ನಗರದಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟಿಕೆ ಮುಂದುವರೆದಿದ್ದು, ಕಾರಿನಲ್ಲಿ ಮದ್ಯಪಾನ ಮಾಡದಂತೆ ಹೇಳಿದಕ್ಕೆ ಉಬರ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೆಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಟ್ಟರಹಳ್ಳಿ ಬಳಿ ನಡೆದಿದೆ.
ಸಂತೋಷ್(37) ಹಲ್ಲೆಗೊಳಗಾದ ಚಾಲಕ, ಹೊಸಕೋಟೆಯ ಜಿನ್ನಾಗರ ನಿವಾಸಿ ಸಂತೋಷ್ ಉಬರ್ ಬಾಡಿಗೆ ವಾಹನ ಪೂರೈಕೆ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದು, ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೈರತ್ತಿ ಬಳಿಯ ಹೊಸೂರು ಬಂಡೆಯಿಂದ ನೈಜೀರಿಯಾ ಮೂಲದ ಪ್ರಜೆಗಳಾದ ಜೆಪ್ ಸೇರಿದಂತೆ ಆತನ ನಾಲ್ವರು ಸ್ನೇಹಿತರು ಭಟ್ಟರಹಳ್ಳಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾರೆ.
ಚಾಲಕ ಸಂತೋಷ್ ಹೊಸರು ಬಂಡೆಗೆ ತೆರಳಿ ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಉಬರ್‌ನಲ್ಲಿ ಕಾಯ್ದಿರಿಸಿದಂತೆ ಭಟ್ಟರಹಳ್ಳಿಗೆ ಬಿಡಲು ಕರೆದೊಯ್ದಿದ್ದಾನೆ, ಗೂಗಲ್ ರೂಟ್ ಮ್ಯಾಪ್‌ನಲ್ಲಿ ಸೂಚಿಸಿರುವ ಮಾರ್ಗದಲ್ಲಿ ತೆರಳುತ್ತಿದ್ದ ಚಾಲಕ ಸಂತೋಷ್‌ನಿಗೆ ನೈಜೀರಿಯಾ ಪ್ರಜೆಗಳು ತಾವು ಹೇಳಿದ ಮಾರ್ಗದಲ್ಲಿ ಚಲಿಸುವಂತೆ ಸೂಚಿಸಿದ್ದಾರೆ ಇದಕ್ಕೆ ನಿರಾಕರಿಸಿದ್ದಕ್ಕೆ ಮಾರ್ಗ ಮಧ್ಯೆಯುದ್ದಕೂ ವಾಹನದಲ್ಲೇ ಥಳಿಸಿದಲ್ಲದೆ ರಾತ್ರಿ 2.45 ವರೆಗೂ ಕಾರಿನಲ್ಲಿ ಸುತ್ತಾಡಿಸಿದ್ದಾರೆ ಎಂದು ಉಬರ್ ಚಾಲಕ ತಿಳಿಸಿದ್ದಾರೆ.
ಮನಬಂದತೆ ಥಳಿಸಿ,ಹಣ ನೀಡದೆ ಕಾಲ್ಕಿತ್ತರು: ರಸ್ತೆ ಮಧ್ಯೆ ಕಿತ್ತಗನೂರಿಗೆ ತೆರಳುವಂತೆ ಸೂಚಿಸಿದ ಆರೋಪಿಗಳು, ಇಬ್ಬರು ಜೊತೆಗಾರರನ್ನು ಅಲ್ಲೇ ಇಳಿಸಿ ಒಬ್ಬ ನೈಜೀರಿಯಾ ಮಹಿಳೆ ಮತ್ತೂಬ್ಬ ಪುರುಷನನ್ನು ಕಾರಿನಲ್ಲಿ ಕೂರಿಸಿಕೊಂಡು ಮದ್ಯ ಖರೀದಿಸಿ ಕಾರಿನಲ್ಲೇ ಕುಡಿಯಲಾರಂಭಿಸಿದ್ದಾರೆ, ಇದನ್ನು ಪ್ರಶ್ನಿಸಿದ ಸಂತೋಷ್‌ನನ್ನು ಥಳಿಸಿದರು. ಚಾಲಕ ಸಂತೋಷ್ ಆರೋಪಿಗಳನ್ನು ಭಟ್ಟರಹಳ್ಳಿಯ ಗಾರ್ಡನ್ ಸಿಟಿ ಕಾಲೇಜು ಬಳಿ ಇಳಿಸಿ, ಬಾಡಿಗೆ ಹಣ ಕೇಳಿದ್ದಾನೆ, ಬಾಡಿಗೆ ನೀಡಲು ನಿರಾಕರಿಸಿ, ಮತ್ತೆ ಹಲ್ಲೆ ನಡೆಸಿದರು.