ಮುಂಬಯಿ : ಅಮೆರಿಕನ್ ಫೆಡರಲ್ ರಿಸರ್ವ್ ಬ್ಯಾಂಕಿನ ಬಹು ಮುಖ್ಯ ಸಭೆಗೆ ಮುಂಚಿತವಾಗಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಗೋಚರಿಸಿರುವ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 21.39 ಅಂಕಗಳ ನಷ್ಟದೊಂದಿಗೆ 32,402.37 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎಂಟು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 761.79 ಅಂಕಗಳನ್ನು ಸಂಪಾದಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ದಾಖಲಿಸಿದ ಹೊಸ ಎತ್ತರದ ಮಟ್ಟದಿಂದ (10,153.10) ಕೆಳ ಜಾರಿ ದಿನಾಂತ್ಯದ ವೇಳೆಗೆ 5.55 ಅಂಕಗಳ ನಷ್ಟದೊಂದಿಗೆ 10,147.55 ಅಂಕಗಳ ಮಟ್ಟದಲ್ಲಿ ಸ್ಥಿತವಾಯಿತು.
ನಿಫ್ಟಿ 50 ಗೊಂಚಲಿನಲ್ಲಿ ಇಂದು 23 ಶೇರುಗಳು ಮುನ್ನಡೆ ಸಾಧಸಿದರು 28 ಶೇರುಗಳು ಹಿನ್ನಡೆಗೆ ಗುರಿಯಾದವು.
ಇಂದಿನ ಟಾಪ್ ಗೇನರ್‌ಗಳು : ಗೇಲ್, ಟಾಟಾ ಮೋಟರ್, ಟಾಟಾ ಮೋಟರ್ (ಡಿ), ಭಾರ್ತಿ ಇನ್‌ಫ್ರಾಟೆಲ್, ಬಿಪಿಸಿಎಲ್. ಟಾಪ್ ಲೂಸರ್‌ಗಳು : ಕೋಲ್ ಇಂಡಿಯಾ, ಅರಬಿಂದೋ ಫಾರ್ಮಾ, ಹಿಂಡಾಲ್ಕೊ, ಈಶರ್ ಮೋಟರ್, ಎಚ್ ಡಿ ಎಫ್ ಸಿ.