ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ನೆಗೆಟಿವ್ ಟ್ರೆಂಡ್ ಪರಿಣಾಮ ಬುಧವಾರ(ಜನವರಿ 19) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 600ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ಶೀಘ್ರವೇ ಅಲ್ಲು ಅಭಿನಯದ Pushpa 2 ಸಿನಿಮಾದ ಚಿತ್ರೀಕರಣ; ರಶ್ಮಿಕಾ ಮಂದಣ್ಣ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 656.04 ಅಂಕಗಳಷ್ಟು ಇಳಿಕೆಯಾಗಿದ್ದು, 60,098.82 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 174.60 ಅಂಕಗಳಷ್ಟು ಕುಸಿತವಾಗಿದ್ದು, 17,938.40 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆಯಿಂದಾಗಿ ಏಷ್ಯನ್ ಪೇಂಟ್ಸ್, ಶ್ರೀ ಸಿಮೆಂಟ್ಸ್, ಇನ್ಫೋಸಿಸ್, ಗ್ರಾಸಿಂ ಇಂಡಸ್ಟ್ರೀಸ್ ಮತ್ತು ಎಚ್ ಯುಎಲ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಒಎನ್ ಜಿಸಿ, ಟಾಟಾ ಮೋಟಾರ್ಸ್, ಎಸ್ ಬಿಐ, ಕೋಲ್ ಇಂಡಿಯಾ ಮತ್ತು ಯುಪಿಎಲ್ ಷೇರುಗಳು ಲಾಭಗಳಿಸಿದೆ.
ಮಂಗಳವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 554.05 ಅಂಕಗಳಷ್ಟು ಕುಸಿತಗೊಂಡು, 60,754.86ರಲ್ಲಿ ವಹಿವಾಟು ಮುಕ್ತಾಯಗೊಂಡಿತ್ತು. ಅದೇ ರೀತಿ ನಿಫ್ಟಿಯಲ್ಲಿ 195.05 ಅಂಕಗಳಷ್ಟು ಇಳಿಕೆಯೊಂದಿಗೆ 18,113.05ರಲ್ಲಿ ವಹಿವಾಟು ಅಂತ್ಯಗೊಂಡಿತ್ತು.