ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ಮಂಗಳವಾರ ಅತ್ಯುತ್ಸಾಹದ ವಾತಾವರಣ ಉಂಟಾಗಿತ್ತು. ಬಿಎಸ್‌ಇ ಮತ್ತು ನಿಫ್ಟಿ ಸೂಚ್ಯಂಕ ಗರಿಷ್ಠ ಪ್ರಮಾಣಕ್ಕೆ ನೆಗೆದಿವೆ. ಬಿಎಸ್‌ಇ ಸೂಚ್ಯಂಕ ದಿನಾಂತ್ಯಕ್ಕೆ 259.33 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿ 47,613.08ರಲ್ಲಿ ಮುಕ್ತಾಯವಾಯಿತು. ಇತ್ತೀಚಿನ ದಿನಗಳಲ್ಲಿ ಇದು ಗರಿಷ್ಠ ಪ್ರಮಾಣದ ಮುಕ್ತಾಯವಾಗಿದೆ. ಬ್ಯಾಂಕಿಂಗ್ ಮತ್ತು
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾದ ಹಿನ್ನೆಲೆಯಲ್ಲಿ ಈ ಚೇತೋಹಾರಿ ಬೆಳವಣಿಗೆ ನಡೆದಿದ್ದು, ಸತತ ಐದನೇ ದಿನ ಗೂಳಿಯ ಓಟ ನಡೆದಿದೆ. ಮಧ್ಯಂತರದಲ್ಲಿ ಸೂಚ್ಯಂಕ 47, 714.55 ಪಾಯಿಂಟ್ಸ್‌ಗಳ ವರೆಗೆ ಏರಿಕೆಯಾಗಿತ್ತು.
ಅಮೆರಿಕದಲ್ಲಿ ಪ್ರಕಟಿಸಲಾಗಿರುವ ಉತ್ತೇಜನ ಪ್ಯಾಕೇಜ್, ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದ ಸೂಚ್ಯಂಕ ಏರಿಕೆಯಾಗಲು ಪ್ರಧಾನ ಕಾರಣ. ಇದರ ಜತೆಗೆ ಶೀಘ್ರದಲ್ಲಿಯೇ ಮೂರನೇ ತ್ತೈಮಾಸಿಕ ವರದಿಗಳು ಪ್ರಕಟವಾಲಿವೆ ಮತ್ತು ಅತ್ಯಂತ ಪ್ರಧಾನವಾಗಿರುವ ಘಟನೆಗಳು ನಿರೀಕ್ಷಿತವಾದದ್ದೇನೂ ಇಲ್ಲ. ಹೀಗಾಗಿ, ಮಾರುಕಟ್ಟೆಯಲ್ಲಿ ನಿರಾಳತೆ ಇರುವುದೂ ಈ ಬೆಳವಣಿಗೆಗೆ ಕಾರಣವಾಗಿದೆ. ಇದರ ಜತೆಗೆ ದೇಶದಲ್ಲಿ 17 ಸಾವಿರಕ್ಕಿಂತ ಕಡಿಮೆ ಸೋಂಕು ದಾಖಲಾದದ್ದೂ ಧನಾತ್ಮಕ ಪರಿಣಾಮ ಬೀರಿತು.
ಇನ್ನು ನಿಫ್ಟಿ ಸೂಚ್ಯಂಕ ಕೂಡ 59.40 ಪಾಯಿಂಟ್ಸ್‌ಗಳಷ್ಟು ಪುಟಿದೆದ್ದು, ದಿನಾಂತ್ಯಕ್ಕೆ 13, 932.60ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ ನಿಫ್ಟಿ ಸೂಚ್ಯಂಕ 13,967.60ರ ವರೆಗೆ ತಲುಪಿತು.
ರೂಪಾಯಿ ಬಲವೃದ್ಧಿ: ಅಮೆರಿಕದ ಡಾಲರ್ ಎದುರು 7 ಪೈಸೆ ಏರಿಕೆಯಾಗಿದೆ. 73.42 ರೂ.ಗೆ ಶುರುವಾಗಿ ದಿನಾಂತ್ಯಕ್ಕೆ 73.42 ರೂ.ಗಳಲ್ಲಿ ವಹಿವಾಟು ಮುಕ್ತಾಯವಾಯಿತು.
ಬಿಎಸ್‌ಇ
259.33- ಸೂಚ್ಯಂಕ ಏರಿಕೆ
47,613.08- ಮುಕ್ತಾಯದ ಪಾಯಿಂಟ್ಸ್
ನಿಫ್ಟಿ
59.40- ಸೂಚ್ಯಂಕ ಏರಿಕೆ
13, 932.60- ಮುಕ್ತಾಯದ ಪಾಯಿಂಟ್ಸ್