Advertisement

ನಿಫಾ: ಆರೋಗ್ಯ ಸ್ಥಿರ

01:02 AM Jun 06, 2019 | Team Udayavani |

ಕೊಚ್ಚಿ: ನಿಫಾ ಸೋಂಕಿನಿಂದ ಬಳಲುತ್ತಿರುವ ಕೇರಳದ 23 ವರ್ಷದ ವಿದ್ಯಾರ್ಥಿಯ ಆರೋಗ್ಯ ಸ್ಥಿರವಾಗಿದ್ದು, ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಐವರು ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಮಾಹಿತಿ ನೀಡಿದ್ದಾರೆ.

Advertisement

311 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ನಾಲ್ವರನ್ನು ಹೊರತುಪಡಿಸಿ ಉಳಿದವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ, ನಿಫಾ ವೈರಸ್‌ ಅನ್ನು ನಿಯಂತ್ರಿಸುವ ಹ್ಯೂಮನ್‌ ಮೊನೊಕ್ಲೊನಾಲ್‌ ಆ್ಯಂಟಿಬಾಡಿ ಎಂಬ ವಿಶೇಷ ಔಷಧವನ್ನು ಕೊಚ್ಚಿಗೆ ತರಲಾಗಿದ್ದು, ಅಗತ್ಯಬಿದ್ದರೆ ಅದನ್ನು ಬಳಸಲಾಗುವುದು ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next