Advertisement

ಟಿ20 ತ್ರಿಕೋನ ಸರಣಿ: ಭಾರತ-ಲಂಕಾ ನಡುವೆ ಮೊದಲ ಪಂದ್ಯ

06:55 AM Feb 21, 2018 | Team Udayavani |

ಕೊಲಂಬೊ: ಶ್ರೀಲಂಕಾದ ಸ್ವಾತಂತ್ರ್ಯದ 70ನೇ ವರ್ಷಾಚರಣೆಯ ಅಂಗವಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ನಿದಹಾಸ್‌ ಟ್ರೋಫಿಗಾಗಿ ಟ್ವೆಂಟಿ20 ತ್ರಿಕೋನ ಸರಣಿಯನ್ನು ಆಯೋಜಿಸುತ್ತಿದೆ. ಈ ಸರಣಿ ಮಾ. 6ರಂದು ಆರಂಭವಾಗಲಿದ್ದು ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಪಂದ್ಯ ನಡೆಯಲಿದೆ. ಬಾಂಗ್ಲಾದೇಶ ಈ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಮೂರನೇ ತಂಡವಾಗಿದೆ.

Advertisement

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿರುವ ಈ ಕೂಟದಲ್ಲಿ ಎಲ್ಲ ತಂಡಗಳು ಎದುರಾಳಿ ತಂಡವನ್ನು ಎರಡು ಬಾರಿ ಎದುರಿಸಲಿದೆ. ಅಗ್ರ ಎರಡು ತಂಡಗಳು ಮಾ. 18ರಂದು ನಡೆಯುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿದೆ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ಬಳಿಕ ತ್ರಿಕೋನ ಸರಣಿ ಆರಂಭವಾಗಲಿದೆ.

70 ವರ್ಷವೆಂಬುದು ದೀರ್ಘ‌ ಪಯಣ. ಸ್ವಾತಂತ್ರ್ಯ ಸಿಕ್ಕಿ 70 ವರ್ಷವಾಗಿರುವ ಕಾರಣ ಅದನ್ನು ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ನಮ್ಮ ನೆರೆಯ ರಾಷ್ಟ್ರಗಳ ಜತೆಗೂಡಿ ಕ್ರಿಕೆಟ್‌ ಕೂಟ ಆಯೋಜಿಸಲು ನಿರ್ಧರಿಸಿದೆವು ಎಂದು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ)ನ ಅಧ್ಯಕ್ಷ ತಿಲಂಗ ಸುಮತಿಪಾಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next