Advertisement
ರಾಷ್ಟ್ರೀಯ ಹೆದ್ದಾರಿ 50ರಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್‌ನಿಲ್ದಾಣ, ಕಾಲೇಜು ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಭೆಯಾಗಿ ಮಾರ್ಪಟ್ಟಿತು.
Related Articles
Advertisement
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಮೀರ ನಂದವಾಡಗಿ, ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ ಮಾತನಾಡಿ, ರೈತರ ಸಮಸ್ಯೆ ಇಂದು ನಿನ್ನೆಯದಲ್ಲ, ಕಳೆದ ಹಲವಾರು ವರ್ಷಗಳಿಂದಲೂ ಸಮಸ್ಯೆಗಳ ಮಧ್ಯ ರೈತ ಬದುಕು ನಡೆಸುತ್ತಿದ್ದಾನೆ. ಸಮಸ್ಯೆಗಳು ತೀವ್ರವಾದಾಗ ಸಾವಿಗೆ ಶರಣಾಗುತ್ತಿದ್ದಾನೆ. ಉತ್ತರ ಕರ್ನಾಟಕ ಪ್ರವಾಹಕ್ಕೆ ಲಕ್ಷಾಂತರ ರೈತರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಇನ್ನೂ ನೀಡಲಾಗಿಲ್ಲ. ಬೆಳೆದು ನಿಂತ ಫಸಲು ನೀರಲ್ಲಿ ಕೊಚ್ಚಿ ಹೋಗಿದ್ದು ರೈತ ಕಣ್ಣಿರು ಹರಿಸುವಂತಾಗಿದೆ. ಸಾಲಮನ್ನಾ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಕಬ್ಬು ಬೆಳೆದ ರೈತರಿಗೆ ಪ್ರತಿ ಭಾರಿ ದರ ನಿಗಮಾಡಲಾಗುತ್ತಿಲ್ಲ ಈ ಬಾರಿ ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗ ದಿ ಮಾಡಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಕಾರ್ಯ ಮಾಡಬೇಕು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಲು ಸರಕಾರ ಮುಂದಾಗದಿದ್ದಲ್ಲಿ ರೈತರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ರೈತ ಸಂಘದ ಮುಖಂಡರಾದ ಅಮಾತೆ ಗೌಡರ, ರಾಜು ಬಾಗೇವಾಡಿ, ಶಿವಪ್ಪ ಇಂಗಳೇಶ್ವರ ಸೇರಿದಂತೆ ಮುಂತಾದವರು ಮಾತನಾಡಿದರು.ರೈತರಾದ ಮಲ್ಲಯ್ಯ ನಾಗೂರ, ಶ್ರೀಶೈಲ ಮೇಟಿ, ಬಸವರಾಜ ಕಮತಗಿ, ಸುಭಾಷ್ ಚೋಪಡೆ, ಸಾಬನ್ನಾ ಮಾದರ, ಈರಣಗೌಡ ಪಾಟೀಲ, ಸೋಮಪ್ಪ ಲಮಾಣಿ, ಎನ್.ಬಿ. ಪಾಟೀಲ, ಎಸ್. ಆರ್. ಬಂಡಿಬಡ್ಡರ, ರಾಜು ಬಂಡಿವಡ್ಡರ, ನೀಲಪ್ಪ ಮುಳವಾಡ, ಪರಶುರಾಮ್ ದಂಡಿನ, ಸಂಗಪ್ಪ ಚಿಮ್ಮಲಗಿ, ಶಂಕ್ರಪ್ಪ ಪೂಜಾರಿ, ಜಮುಲು ಲಮಾಣಿ, ಶರಣಪ್ಪ ಹಟ್ಟಿ, ಸರಸ್ವತಿ ವಸ್ತ್ರದ, ಗೌರಮ್ಮ ಕಂಬಾರ, ಡವಲಬಿ ನದಾಫ್, ಶರಣಮ್ಮ ನಂದಿಹಾಳ, ಇದ್ದು ವಾಲೀಕಾರ, ಸಂಗಪ್ಪ ದಂಡಿನ, ಶ್ರೀಕಾಂತ ಲಮಾಣಿ ಮತ್ತಿತರರಿದ್ದರು.