Advertisement

ಫ್ರಾನ್ಸ್‌ ಮಾಜಿ ಅಧ್ಯಕ್ಷ ಸರ್ಕೋಜಿ ಬಂಧನ

07:30 AM Mar 21, 2018 | Team Udayavani |

ಪ್ಯಾರಿಸ್‌: ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಲಿಬಿಯಾದಿಂದ ಅಕ್ರಮವಾಗಿ ಹಣ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕೋಜಿ ಅವರಿಗೆ ಹತ್ತಿರವಾಗಿರುವ ಉದ್ಯಮಿಯೊಬ್ಬರು ತಾವು ಲಿಬಿಯಾದಿಂದ ಹಣ ತುಂಬಿದ್ದ ಮೂರು ಸೂಟ್‌ಕೇಸ್‌ಗಳನ್ನು ತಂದು ಸರ್ಕೋಜಿ ಅವರಿಗೆ ಒಪ್ಪಿಸಿದ್ದಾಗಿ ಹೇಳಿದ್ದು, ಅಲ್ಲಿನ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಆದರೆ, ಈ ಆರೋಪವನ್ನು ಸರ್ಕೋಜಿ ಈವರೆಗೆ ನಿರಾಕರಿಸುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಸರ್ಕೋಜಿ ನಿಕಟರ್ತಿ ಬಂಧನವಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next