Advertisement
ಸಾಮಾನ್ಯ ಸಭೆಯು ಅಧ್ಯಕ್ಷೆ ರತಿ ಎಸ್. ನಾಯ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸದಸ್ಯರಾದ ಶೇಕಬ್ಬ ಮಾತನಾಡಿ, ಜನರೇಟರ್ ನಾಪತ್ತೆ ಪ್ರಕರಣ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಗ್ರಾಮಸ್ಥರಲ್ಲೂ ಸಂಶಯ ಮೂಡಿಸಿದೆ. ಜನರೇಟರ್ ಯಾವ ಹಂತದಲ್ಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದರು.
ಉಪಾಧ್ಯಕ್ಷ ಅಸ್ಕರ್ ಅಲಿ ಮಾತನಾಡಿ, ದಾರಿ ದೀಪಗಳು ಕೆಲವು ದಿನಗಳ ಹಿಂದೆ ಸಿಡಿಲಿನಿಂದ ಕೆಟ್ಟು ಹೋಗಿವೆ. ಇನ್ನೂ ಕೆಲವೆಡೆ ಸಿಂಗಲ್ ಫೇಸ್ ಇದ್ದು, ಮೆಸ್ಕಾಂನವರು ಕಡಿತಗೊಳಿಸಿದ್ದಾರೆ. ಒಟ್ಟಿನಲ್ಲಿ ಹೊಸ ದಾರಿ ದೀಪಕ್ಕೆ ಕ್ರಿಯಾಯೋಜನೆ ರಚಿಸಿ ಗುತ್ತಿಗೆ ಹರಾಜು ಕರೆಯುವ ಪ್ರಕ್ರಿಯೆ ನಡೆಸಬೇಕಾಗುವುದು ಎಂದರು. ಸಭೆ ಒಪ್ಪಿಗೆ ಸೂಚಿಸಿತು. ಗ್ರಾಮ ವ್ಯಾಪ್ತಿಯಲ್ಲಿ ಎಲ್ಲ ಟ್ಯಾಂಕ್‌ಗಳ ಮುಚ್ಚಳಕ್ಕೆ ಬೀಗ ಹಾಕಿ ಎಚ್ಚರ ವಹಿಸಬೇಕು. ಅಗತ್ಯವಿದ್ದಲ್ಲಿ ಚೇಂಬರ್ ನಿರ್ಮಾಣ ಮಾಡಿ ಎಂದು ಸದಸ್ಯರಾದ ಮೈಕಲ್ ವೇಗಸ್ ಸಲಹೆ ಕೊಟ್ಟರು.
Related Articles
Advertisement
ಉಪಚುನಾವಣೆಯಲ್ಲಿ ಚುನಾಯಿತ ಸದಸ್ಯರಿಗೆ ಅಭಿನಂದಿಸಲಾಯಿತು. ಸಭೆ ಮುಗಿಯುತ್ತಿದ್ದಂತೆ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಬಾಬು ನಾಯ್ಕ, ಯಮುನಾ, ಜ್ಯೋತಿ, ಪ್ರಶಾಂತ್ ಎನ್., ಶೇಕಬ್ಬ, ಸತ್ಯವತಿ, ಅನಿ ಮಿನೆಜಸ್, ಮೈಕಲ್ ವೇಗಸ್ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.
ಏಲಂನಲ್ಲಿ ತಾರತಮ್ಯ ಬೇಡಸದಸ್ಯರಾದ ಪ್ರಶಾಂತ್ ಮಾತನಾಡಿ, ಪಂಚಾಯತ್ ಅಂಗಡಿ, ಮುಂಗಟ್ಟುಗಳ ಏಲಂನಲ್ಲಿ ತಾರತಮ್ಯ ಏಕೆ ಮಾಡುತ್ತೀರಿ? ಏಲಂನಲ್ಲಿ ಭಾಗವಹಿಸಿದ ಎಲ್ಲರಿಗೂ ಸಮಾನ ನ್ಯಾಯ ಕೊಟ್ಟು ಸಹಕರಿಸಿ. ಹೊರತು ಒಬ್ಬರಿಗೆ ಮುಂಗಡ ಹಣ ಇರಿಸಿಕೊಳ್ಳುವುದು ಇನ್ನುಳಿದವರಿಗೆ ಬದಲಿ ನ್ಯಾಯ ಮಾಡಬೇಡಿ. ಆ ರೀತಿ ಮರುಕಳುಹಿಸದಂತೆ ಎಚ್ಚರ ವಹಿಸಿ. ಸಬೂಬು ನೀಡುವುದು ಬೇಡ ಎಂದರು.