ಐಸ್ ತುಣುಕುಗಳನ್ನು ಜ್ಯೂಸ್‌ಗೆ ಹಾಕ್ಕೊಂಡು ಕುಡಿದರೆ, ತಣ್ಣಗಿನ ಫೀಲ್ ಆಗುತ್ತೆ. ರಕ್ತ ಬರುತ್ತಿರುವ ಗಾಯದ ಮೇಲೆ ಐಸ್ ಇಟ್ಟರೆ, ರಕ್ತಸ್ರಾವ ನಿಲ್ಲುತ್ತೆ… ಫ್ರಿಡ್ಜ್ನಲ್ಲಿಟ್ಟ ಐಸ್‌ಕ್ಯೂಬ್‌ಗಳ ಇವೆರಡು ಉಪಕಾರದ ಬಗ್ಗೆ ಮಾತ್ರ ನಮ್ಗೆ ಗೊತ್ತು. ಆದರೆ, ಐಸ್‌ಕ್ಯೂಬ್ ಐಶ್ವರ್ಯಾ ರೈಯಂಥ ಲುಕ್ ಕೊಡುತ್ತೆ ಅನ್ನೋದು ನಿಮ್ಗೆ ಗೊತ್ತೇ?
- ಐಸ್‌ಕ್ಯೂಬ್‌ನಿಂದ ದಿನವೂ ಮುಖಕ್ಕೆ ಮಸಾಜ್ ಮಾಡಿಕೊಂಡರೆ, ರಕ್ತಚಲನೆ ಸರಾಗಗೊಳ್ಳುತ್ತೆ. ಚರ್ಮದ ಬಿರುಕುಗಳನ್ನು ಮುಚ್ಚುವ ಕೆಲಸವನ್ನೂ ಐಸ್‌ಕ್ಯೂಬ್ ಮಾಡುತ್ತೆ. ಚರ್ಮದ ಕಾಂತಿಯೂ ಇದರಿಂದ ಹೆಚ್ಚುತ್ತೆ.
– ಫೇಷಿಯಲ್ ಅಥವಾ ಐಬ್ರೋ ಮಾಡಿಕೊಂಡ ಮರುದಿನ, ತುಸು ಮುಖ ದಪ್ಪಗಾಗುವುದು (ಸಿಟ್ಟಿನಿಂದಲ್ಲ), ಕೆಂಪಗಾಗುವುದು ಸಾಮಾನ್ಯ. ಬ್ಯೂಟಿ ಪಾರ್ಲರ್‌ನಿಂದ ಬಂದ ಕೂಡಲೇ, ಐಸ್‌ನಿಂದ 10 ನಿಮಿಷ ಮುಖಕ್ಕೆ ಮಸಾಜ್ ಮಾಡಿಕೊಂಡರೆ, ಹೀಗೆ ದಪ್ಪ ಆಗುವುದನ್ನು ತಪ್ಪಿಸಬಹುದು.
– ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುವುದಕ್ಕೂ ಮುನ್ನ, ಐಸ್‌ಕ್ಯೂಬ್‌ನಿಂದ ಮಸಾಜ್ ಮಾಡಿದರೆ, ಮೇಕಪ್‌ನ ಫಲಿತಾಂಶ ದಿನದ ದೀರ್ಘಕಾಲದ ವರೆಗೆ ಇರುತ್ತದೆ. ಮುಖಕ್ಕೂ ತಾಜಾ ಕಳೆ ಸಿಗುತ್ತದೆ.
– ಮೊಡವೆ ಒಡೆದು, ರಕ್ತ ಜಿನುಗುತ್ತಿದ್ದರೆ, ಮುಖದ ಸೌಂದರ್ಯಕ್ಕೆ ಆ ಭಾಗ ಒಂಥರಾ ಕಪ್ಪುಚುಕ್ಕೆ. ಇಂಥ ವೇಳೆ ಮೊಡವೆ ಒಡೆದ ಜಾಗದಲ್ಲಿ, ಐಸ್‌ಕ್ಯೂಬ್‌ನಿಂದ 10 ನಿಮಿಷ ಮಸಾಜ್ ಮಾಡಿದರೆ, ರಕ್ತಸ್ರಾವ ನಿಂತು, ಮೊಡವೆ ಎದ್ದ ಜಾಗ ಚರ್ಮಕ್ಕೆ ಹೊಂದಿಕೊಳ್ಳುತ್ತದೆ.
– ಸನ್ ಬರ್ನ್ ಆಗಿದ್ದರೆ, ಅದಕ್ಕೆ ಲೋಶನ್ ಹಚ್ಚಿ, ಚರ್ಮ ಮೊದಲಿನಂತಾಗಲೀ ಎಂದು ಕಾಯಬೇಕಾಗಿಲ್ಲ. ಐಸ್‌ಕ್ಯೂಬ್‌ನಿಂದ ಸನ್‌ಬರ್ನ್ ಆದ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿಕೊಂಡರೆ, ಬೇಗನೆ ಫಲಿತಾಂಶ ಸಿಗುತ್ತದೆ.