Advertisement

NIA Raid: ಮಾವೋವಾದಿಗಳೊಂದಿಗೆ ನಂಟು… ಆಂಧ್ರ, ತೆಲಂಗಾಣ ಸೇರಿ 60 ಕಡೆ ಎನ್ ಐಎ ದಾಳಿ

12:51 PM Oct 02, 2023 | Team Udayavani |

ಆಂಧ್ರಪ್ರದೇಶ: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದೆ.

Advertisement

ಎರಡೂ ರಾಜ್ಯಗಳಲ್ಲಿ ಮಾವೋವಾದಿಗಳ ಅಡಗುತಾಣಗಳನ್ನು ಶೋಧಿಸುತ್ತಿರುವ ಅಧಿಕಾರಿಗಳ ತಂಡ, ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಮಹಿಗಳನ್ನು ಕಲೆ ಹಾಕಿದ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆಯಿಂದಲೇ ಪ್ರತ್ಯೇಕ ತಂಡ ರಚಿಸಿಕೊಂಡ ಎನ್‌ಐಎ ತಂಡಗಳು ರಾಜ್ಯ ಪೊಲೀಸ್ ಪಡೆಗಳೊಂದಿಗೆ ದಾಳಿ ನಡೆಸುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ತೆಲಂಗಾಣದ ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ದಾಳಿ ನಡೆಯುತ್ತಿದೆ.

ಶೋಧ ನಡೆಸುತ್ತಿರುವ ಸ್ಥಳಗಳಲ್ಲಿ ಬಹುತೇಕ ಮಂದಿ ನಕ್ಸಲೀಯರೊಂದಿಗೆ ನಂಟು ಹೊಂದಿರುವ ಶಂಕೆ ಇದೆ. ಆಗಸ್ಟ್ 2023 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 9 ರಂದು, ಎನ್‌ಐಎ ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ದಾಳಿ ಮತ್ತು ಹುಡುಕಾಟಗಳನ್ನು ನಡೆಸಿತ್ತು. ಅದರಲ್ಲಿ ಸ್ಫೋಟಕ ವಸ್ತು, ಡ್ರೋನ್ ಮತ್ತು ಲ್ಯಾಥ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಇದು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಒಳಗೊಂಡಿತ್ತು ಎನ್ನಲಾಗಿದೆ.

Advertisement

ಜೂನ್ ತಿಂಗಳ ಆರಂಭದಲ್ಲಿ ಕೋತಗುಡೆಂನ ಚೆರ್ಲಾ ಮಂಡಲದಲ್ಲಿ ಮೂವರಿಂದ ಆಕ್ಷೇಪಾರ್ಹ ವಸ್ತು, ಡ್ರೋನ್ ಮತ್ತು ಯಂತ್ರವನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಧಂಗ್ರಿಯಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ಪೂಂಚ್‌ನ 4 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ದಾಳಿಯಲ್ಲಿ, ಆಕ್ಷೇಪಾರ್ಹ ಡೇಟಾ, ಹಲವು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಸದ್ಯ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ…

ಇದನ್ನೂ ಓದಿ: Land Dispute: ಜಮೀನು ವಿವಾದ… ಎರಡು ಗುಂಪುಗಳ ನಡುವೆ ಘರ್ಷಣೆ: 6 ಮಂದಿ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next