Advertisement
ರಾಯಭಾರ ಕಚೇರಿಗಳ ಮೇಲಿನ ದಾಳಿಯ ವಿಚಾರಣೆಯನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಬಳಿಕ 2023ರ ಜೂನ್‌ನಲ್ಲಿ ಎನ್‌ಐಎ ಕೈಗೆತ್ತಿಕೊಂಡಿದೆ. ಆ ಬಳಿಕ ಪ್ರಕರಣ ಸಂಬಂಧ ಭಾರತದಲ್ಲೂ 50 ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, 80ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದೆ. ಅಲ್ಲದೇ, ರಾಯಭಾರ ಕಚೇರಿಯ ದಾಳಿಗಳಿಗೆ ಸಂಬಂಧಿಸಿದ ಕೆಲವು ಸಿಸಿಟಿವಿ ವೀಡಿಯೋಗಳನ್ನು ಎನ್‌ಐಎ ಬಿಡುಗಡೆಗೊಳಿಸಿ, ದುಷ್ಕರ್ಮಿಗಳನ್ನು ಸೆರೆ ಹಿಡಿ ಯಲು ಸಾರ್ವಜನಿಕರ ಸಹಾಯ ಕೋರಿತ್ತು. ಇದೀಗ ಜನರು ನೀಡಿರುವಮಾಹಿತಿಗಳನ್ನೇ ಆಧರಿಸಿ 43 ಶಂಕಿತರನ್ನು ಗುರುತಿಸಲಾಗಿದೆ ಎಂದು ಮೂಲಗಳು ಹೇಳಿವೆ.2023ರ ಮಾರ್ಚ್ ಮತ್ತು ಜುಲೈಯಲ್ಲಿ ಭಾರತದ ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿತ್ತು. ಮಾ.19ರಂದು ಲಂಡನ್‌ನಲ್ಲಿರುವ ರಾಯಭಾರ ಕಚೇರಿ ಮೇಲೆ ಖಲಿಸ್ಥಾನಿ ಉಗ್ರರು 2 ಪ್ರತ್ಯೇಕ ದಾಳಿ ನಡೆಸಿದ್ದರು. ಜು.12ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇದೇ ಮಾದರಿಯ ದಾಳಿ ನಡೆದಿತ್ತು. ಕೆನಡಾದಲ್ಲಿ ಪ್ರತಿಭಟನೆ ವೇಳೆ ಖಲಿಸ್ಥಾನಿ ಪರ ಪ್ರತಿಭಟನಕಾರರು ಭಾರತದ ಹೈಕಮಿಷನ್ ಮೇಲೆ ಗ್ರೆನೇಡ್ ದಾಳಿಯನ್ನೂ ನಡೆಸಿದ್ದರು.