Advertisement

NIA: ಬಂಧಿತ ಶಂಕಿತ ಉಗ್ರರ ಮನೆ ಮೇಲೆ ಎನ್‌ಐಎ ದಾಳಿ: ದಾಖಲೆ, ಹಣ ವಶ

10:05 AM Dec 14, 2023 | Team Udayavani |

ಬೆಂಗಳೂರು: ನಗರ ಸೇರಿ ರಾಜ್ಯದ ಜನಸಂದಣಿ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಐವರ ಪೈಕಿ ನಾಲ್ವರು ಶಂಕಿತ ಉಗ್ರರು ಸೇರಿ ಆರು ಮಂದಿ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

Advertisement

ಕೊಡಿಗೇಹಳ್ಳಿಯ ಮೊಹಮ್ಮದ್‌ ಉಮರ್‌, ಭದ್ರಪ್ಪ ಲೇಔಟ್‌ ನಿವಾಸಿ ಮೊಹಮ್ಮದ್‌ ಫೈಸಲ್‌ ರಬ್ಟಾನಿ, ಮೊಹಮ್ಮದ್‌ ಫಾರೂಕ್‌, ತನ್ವೀರ್‌ ಅಹ್ಮದ್‌ ಮತ್ತು ಪ್ರಕರಣದಲ್ಲಿ ದುಬೈನಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಅಹ್ಮದ್‌, ಆತನ ಸಹೋದರನ ಮನೆ ಹಾಗೂ ಮತ್ತೂಬ್ಬ ಶಂಕಿತನ ಮನೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆರೋಪಿಗಳ ಮನೆಯಲ್ಲಿ ಡಿಜಿಟಲ್‌ ಸಾಧನಗಳು, ಕೆಲ ದಾಖಲೆಗಳು, 7.3 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಕಳೆದ ಜುಲೈನಲ್ಲಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಅಂದಿನ ಜಂಟಿ ಪೊಲೀಸ್‌ ಆಯುಕ್ತ ಎಸ್‌. ಡಿ. ಶರಣಪ್ಪ ನೇತೃತ್ವದಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next