Advertisement

NIA Raid: ಬಳ್ಳಾರಿ ನಗರದ 9 ಕಡೆ ಎನ್‌ ಐಎ ದಾಳಿ; ಹಲವರು ವಶಕ್ಕೆ

12:06 PM Dec 18, 2023 | Team Udayavani |

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಸೋಮವಾರ(ಡಿ.18 ರಂದು) ಎನ್ ಐಎ ತಂಡ ದಾಳಿ ನಡೆಸಿದ್ದು, ನಿಷೇಧಿತ ಸಂಘಟನೆ ಮತ್ತು ಟೆರರಿಸ್ಟ್ ಗಳೊಂದಿಗೆ ಗುರುಸಿಕೊಂಡ ಹಿನ್ನಲೆಯಲ್ಲಿ ಬೃಹತ್ ಕಾರ್ಯಾಚರಣೆಯಲ್ಲಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ.

Advertisement

ಬಳ್ಳಾರಿ ಪೊಲೀಸರ ಸಹಕಾರದೊಂದಿಗೆ ಭದ್ರತೆ ಪಡೆದು, ಬಳ್ಳಾರಿ ನಗರದ ಕೌಲ್ ಬಜಾರ್, ಜಾಗೃತಿ ನಗರ ಸೇರಿ ಒಂಬತ್ತು ಕಡೆ ಎನ್ ಐ ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 2ರಂದು ನಕಲು ನೋಟು ಮುದ್ರಣ ಮತ್ತು ಚಲಾವಣೆಗೆ ಸಂಬಂಧಿಸಿದಂತೆ ದಾಳಿ ಮಾಡಿ 19 ವರ್ಷದ ಯುವಕನನ್ನು ಎನ್ ಐಎ ತಂಡ ಬಂಧಿಸಿತ್ತು. ಆ ಬಳಿಕ ಇಂದು ಮತ್ತೊಂದು ಬೃಹತ್‌ ದಾಳಿ ನಡೆಸಿದೆ.

ಮಾದಕ ವಸ್ತುಗಳ ಕಳ್ಳಸಾಗಾಣೆ.. ದೇಶ ದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವವರ ಎನ್‌ ಐಎ ದಾಳಿ ನಡೆಸಿದೆ. ಒಂಭತ್ತು ತಂಡಕ್ಕೆ ಪ್ರತ್ಯೇಕ ಪೊಲೀಸ್ ಭದ್ರತೆ ಪಡೆದು ದಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next