Advertisement

NIA ದಾಳಿ; ಬೆಂಗಳೂರಿನ 6 ಸ್ಥಳಗಳಲ್ಲಿ ಶೋಧ: ಜೈಲಿನಲ್ಲಿ ಕೈದಿಗಳಿಗೆ ಉಗ್ರ ತರಬೇತಿ ಪ್ರಕರಣ

06:27 PM Dec 13, 2023 | Team Udayavani |

ಬೆಂಗಳೂರು: ಲಷ್ಕರ್-ಎ-ತೊಯ್ಬಾ (LeT) ಉಗ್ರರು ಕೈದಿಗಳಿಗೆ ತರಬೇತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ.

Advertisement

ಕೈದಿಗಳಿಗೆ ತರಬೇತಿ ಪ್ರಕರಣಕ್ಕೆ ಸಂಬಂಧಿಸಿ NIA ತನಿಖೆಗಳ ಮುಂದುವರಿದ ಭಾಗವಾಗಿ ಇಂದು ನಾಲ್ವರು ಆರೋಪಿಗಳ ಮನೆಗಳು ಸೇರಿದಂತೆ ಒಟ್ಟು ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಒಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಶಂಕಿತರೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ವ್ಯಾಪಕವಾಗಿ ಶೋಧ ನಡೆಸಲಾಗಿದೆ.

ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್, ಮೊಹಮ್ಮದ್ ಫಾರೂಕ್ ಮತ್ತು ಪರಾರಿಯಾಗಿರುವ ಆರೋಪಿ ಜುನೈದ್ ಅಹಮದ್ ಗೆ ಸೇರಿದ ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಎನ್‌ಐಎ ತಂಡಗಳು ಹಲವಾರು ಡಿಜಿಟಲ್ ಸಾಧನಗಳು, ವಿವಿಧ ದೋಷಾರೋಪಣೆ ದಾಖಲೆಗಳು ಮತ್ತು 7.3 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು NIA ತಿಳಿಸಿದೆ. ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಉಗ್ರ ನಾಸೀರ್ ಜೈಲಿನಲ್ಲಿ ಶಂಕಿತರಿಗೆ ತರಬೇತಿ‌ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎನ್ ಐಎ ಪ್ರಕರಣದ ತನಿಖೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next