Advertisement

ಶಿವಮೊಗ್ಗ: ಹರ್ಷ ಹತ್ಯೆ ಎನ್‌ಐಎ ತನಿಖೆಗೆ?

10:55 PM Mar 03, 2022 | Team Udayavani |

ಶಿವಮೊಗ್ಗ: ಹರ್ಷ ಕೊಲೆ ಆರೋಪಿಗಳ ವಿರುದ್ಧ ಯುಎಪಿಎ (ಅನ್‌ ಲಾಫ‌ುಲ್‌ ಆ್ಯಕ್ಟಿವಿಟೀಸ್‌ ಪ್ರಿವೆನÒನ್‌ ಆ್ಯಕ್ಟ್ 1967) ಅಡಿ ಕೇಸ್‌ ದಾಖಲಿಸಲಾಗಿದೆ. ನಕ್ಸಲರ ವಿರುದ್ಧ ಬಳಸಿದ್ದ ವಿಶೇಷ ಕಾಯ್ದೆಯನ್ನು ಇದೀಗ ಹರ್ಷ ಕೊಲೆ ಆರೋಪಿಗಳ ವಿರುದ್ಧ ಬಳಸಿರುವುದು ಕುತೂಹಲ ಮೂಡಿಸಿದೆ.

Advertisement

ಸಂಸತ್‌ನಲ್ಲಿ ಅಂಗೀಕಾರ :

2019ರಲ್ಲಿ ಸಂಸತ್‌ನಲ್ಲಿ ಈ ಕಾಯ್ದೆ ಅಂಗೀಕರಿಸಿದ ಅನಂತರ ಕಾಯ್ದೆಗೆ ಬಲ ಬಂದಿದೆ. ಜತೆಗೆ ಕಾನೂನು ಬಾಹಿರ ಚಟುವಟಿಕೆ ನಡೆಸುವವರನ್ನು ಭಯೋತ್ಪಾದಕ ಎಂದು ಪರಿಗಣಿಸಲು ಈ ಕಾಯ್ದೆ ಅನುವು ಮಾಡಿಕೊಡುವುದರಿಂದ ಕಾಯ್ದೆ ಅಂಗೀಕಾರಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಈ ಕಾಯ್ದೆ ಐಪಿಸಿಗಿಂತಲೂ ಭಿನ್ನವಾಗಿದೆ. ಸೆಕ್ಷನ್‌ (43) ಡಿ 5 ಅಡಿ ಆರೋಪಿಗಳಿಗೆ ಜಾಮೀನು ನೀಡುವುದನ್ನು ನಿಬಂìಧಿ ಸಬಹುದು. ಈ ಕಾರಣಕ್ಕೆ ಆರೋಪಿ ಗಳು ಕೃತ್ಯ ಎಸಗಿ ಸುಲಭವಾಗಿ ಪಾರಾಗುವುದು ಕಷ್ಟ ಸಾಧ್ಯ.

ಆರೋಪಿಗಳಆಸ್ತಿ-ಪಾಸ್ತಿ ಜಪ್ತಿಗೂ ಅವಕಾಶ :

ಇನ್ನು ಈ ಆ್ಯಕ್ಟ್‌ನ ಅಳವಡಿಕೆ ಯಿಂದಾಗಿ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳದ ವ್ಯಾಪ್ತಿಗೆ ಒಳಪಡುತ್ತದೆ. ಕಾಯ್ದೆ ಅನ್ವಯ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಅಥವಾ ಅಸಿಸ್ಟೆಂಟ್‌ ಕಮಿಷನರ್‌ ಆಫ್‌ ಪೊಲೀಸ್‌ ರ್‍ಯಾಂಕ್‌ನ ಅ ಧಿಕಾರಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಬೇಕಾಗುತ್ತದೆ. ಅಗತ್ಯ ಬಿದ್ದಲ್ಲಿ ಆರೋಪಿಗಳ ಆಸ್ತಿ-ಪಾಸ್ತಿ ಜಪ್ತಿ ಮಾಡುವ ಅವಕಾಶವೂ ಇದೆ. ಸದ್ಯ ಹರ್ಷ ಕೊಲೆ ಆರೋಪಿಗಳ ವಿರುದ್ಧ ಈ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆಗೆ ಪ್ರಕರಣ ಒಳಪಡುತ್ತಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

Advertisement

ಸರಕಾರದಿಂದ 25 ಲಕ್ಷ ರೂ. ಪರಿಹಾರ :

ಶಿವಮೊಗ್ಗ: ಹರ್ಷ ಕೊಲೆ ಬಗ್ಗೆ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ಅವರು 25 ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿವಾರ ಮಾಜಿ ಸಿಎಂ ಬಿಎಸ್‌ವೈ ಹರ್ಷ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ನಾನು ಹಾಗೂ ಅವರು ಸರಕಾರದ ಪರವಾಗಿ 25 ಲಕ್ಷ ರೂ. ಪರಿಹಾರ ನೀಡುತ್ತೇವೆ. ವಿಶ್ವನಾಥ ಶೆಟ್ಟಿ ಕೊಲೆಯಾದಾಗ ಬಿಜೆಪಿ ಅವರ ಕುಟುಂಬಕ್ಕೆ 18 ಲಕ್ಷ ರೂ. ತಲುಪಿಸಿತ್ತು. ಟೀಕೆ-ಟಿಪ್ಪಣಿಗಳು ಸ್ವಾಭಾವಿಕ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next