Advertisement
ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯ ಡಾ| ಅಬ್ದುರ್ ರೆಹಮಾನ್ ಅಲಿಯಾಸ್ ಡಾ| ಬ್ರೇವ್ ಹೇಳಿಕೆ ಆಧರಸಿ ಅ. 8ರಂದು ಫ್ರೆಜರ್ ಟೌನ್‌ನ ಇರ್ಫಾನ್ ನಾಸೀರ್ ಮತ್ತು ತಮಿಳುನಾಡು ರಾಮನಾಥಪುರದ ಅಹ್ಮದ್ ಅಬ್ದುಲ್ ಖಾದರ್ ಅವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ಸಂದರ್ಭದಲ್ಲಿ ಕೆಲವು ಸ್ಫೋಟಕ ಮಾಹಿತಿ ಸಿಕ್ಕಿದ್ದು, ಅವರ ” ಸರ್ಕಲ್’ ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿದ್ದ ಇನ್ನಷ್ಟು ಮಂದಿಯ ಹೆಸರನ್ನು ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ.
Related Articles
Advertisement
ಇನ್ನಷ್ಟು ಮಂದಿ ಸಿರಿಯಾಗೆ ಇರ್ಫಾನ್ ಮತ್ತು ಖಾದರ್ ಸಮುದಾಯದ ಇನ್ನಷ್ಟು ಮಂದಿಗೆ ಕೆಲ ಆಮಿಷವೊಡ್ಡಿ ಮತ್ತು ಧರ್ಮ ಬೋಧನೆ ಹೆಸರಿನಲ್ಲಿ ಕೇರಳ ಮೂಲಕವೇ ಸಿರಿಯಾಗೆ ಕಳುಹಿಸಲು ಸಿದ್ಧತೆ ನಡೆಸಿದ್ದರು. ಆದರೆ, ದೇಶದಲ್ಲಿ ಲಾಕ್‌ಡೌನ್ ಜಾರಿಯಾದ್ದರಿಂದ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಹೀಗಾಗಿ ಈ ಯೋಜನೆಯನ್ನು ಮುಂದೂಡಲಾಗಿತ್ತು. ಇತ್ತೀಚೆಗೆ ಈ ಕಾರ್ಯ ಮತ್ತೆ ಚುರುಕುಗೊಂಡಿದೆ. ಆದರೆ, ಈ ಇಬ್ಬರ ಸಂಪರ್ಕದಲ್ಲಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಡಾ| ಬ್ರೇವ್ ಮತ್ತೆ ವಶಕ್ಕೆ
ಡಾ| ಅಬ್ದರ್ ರೆಹಮಾನ್ ಅಲಿಯಾಸ್ ಡಾ| ಬ್ರೇವ್‌ನನ್ನು ಮತ್ತೂಮ್ಮೆ ವಶಕ್ಕೆ ಪಡೆಯಲಾಗುವುದು ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಡಾ| ಬ್ರೇವ್‌ಗೆ ವಾಟ್ಸಾಪ್ ಗ್ರೂಪ್ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಅಲ್ಲದೆ, ಸಿರಿಯಾದಿಂದ ವಾಪಸಾಗಿರುವ ಮೂವರ ಬಗ್ಗೆಯೂ ಮಾಹಿತಿ ಇದೆ. ಹೀಗಾಗಿ ಆತನನ್ನು ಹೆಚ್ಚಿನ ವಿಚಾರಣೆಗೆ ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.