Advertisement

15 ಪಿಎಫ್ಐ ಕಾರ್ಯಕರ್ತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

08:38 PM Mar 19, 2023 | Team Udayavani |

ಬೆಂಗಳೂರು: ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಕೆಲ ತಿಂಗಳ ಹಿಂದೆ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ.ಹಳ್ಳಿ ಪೊಲೀಸರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ 15 ಪಿಎಫ್ಐ ಕಾರ್ಯಕರ್ತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

Advertisement

ಪಿಎಫ್ಐ ಅಧ್ಯಕ್ಷ ನಾಸೀರ್‌ ಪಾಷಾ ಸೇರಿ 15 ಜನರ ವಿರುದ್ಧ ಬರೋಬ್ಬರಿ 10,196 ಪುಟಗಳ ಬೃಹತ್‌ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 9 ಕಾರ್ಯಕರ್ತರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ಐವರ ಮೇಲೆ ಐಪಿಸಿ 153ಎ ಅಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಪಿಎಫ್ಐ ಕಾರ್ಯಕರ್ತರ ಹಲವು ಚಟುವಟಿಕೆಗಳ ಬಗ್ಗೆ ಉÇÉೇಖೀಸಲಾಗಿದೆ. ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಮಿಟ್ಟೂರಿನಲ್ಲಿ ಮಿಟ್ಟೂರು ಫ್ರೀಡಂ ಚಾರಿಟೇಬಲ್‌ ಟ್ರಸ್ಟ್‌ ಹೆಸರಲ್ಲಿ ಸರಣಿ ಸಭೆ ನಡೆಸುತ್ತಿದ್ದರು. ಈ ಟ್ರಸ್ಟ್‌ಗೆ ದೇಶದ ಹಲವು ಕಡೆಗಳಿಂದ ಕೋಟ್ಯಂತರ ರೂ. ಫ‌ಂಡಿಂಗ್‌ ಮಾಡಲಾಗಿತ್ತು. ಬಂದ ಹಣವನ್ನು ಅವರ ಸಮುದಾಯದ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌, ಮಕ್ಕಳ ವಿದ್ಯಾಭ್ಯಾಸ, ಪುಸ್ತಕ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ವಿನಿಯೋಗ ಮಾಡಲಾಗಿದೆ. ಪಿಎಫ್ಐ ಕಾರ್ಯಕರ್ತರು ಬೆಂಗಳೂರಿನ ಬೆನ್ಸನ್‌ ಟೌನ್‌ನಲ್ಲೂ ಒಂದು ಸಭೆ ನಡೆಸಿದ್ದರು. ಮಾನಸಿಕ ದೃಢತೆ ಹಾಗೂ ಫಿಸಿಕಲ್‌ ಡಿಫೆನ್ಸ್‌ಗಾಗಿ ಯೋಗದ ಹೆಸರಲ್ಲಿ ಕೆಲ ಕಾರ್ಯಕರ್ತರು ತರಬೇತಿ ಪಡೆಯುತ್ತಿದ್ದರು.

ಆಸಕ್ತಿಯುಳ್ಳ ಯುವಕರನ್ನು ಮಾತ್ರ ಆಯ್ಕೆ ಮಾಡಿ ತರಬೇತಿ ಕೊಡಲಾಗಿದೆ. ಬುಕ್‌-1, ಬುಕ್‌-2, ಬುಕ್‌-3 ಎಂಬ ಹೆಸರಲ್ಲಿ ತರಬೇತಿ ನೀಡಲಾಗುತ್ತಿತ್ತು. ಮೊದಲ ಎರಡು ವಿಭಾಗದಲ್ಲಿ ಮಾನಸಿಕ ದೃಢತೆ ಕಾಪಾಡಲು ತರಬೇತಿ ನೀಡಿದರೆ, ಬುಕ್‌-3 ವಿಭಾಗದಲ್ಲಿ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಆದರೆ, ಪೊಲೀಸರ ಪರಿಶೀಲನೆ ವೇಳೆ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಇದೀಗ ಪಿಎಫ್ಐ ಕಾರ್ಯಕರ್ತರ ತರಬೇತಿ, ಸಭೆ, ಹಣ ಸಂಗ್ರಹದ ಕುರಿತು ಪೊಲೀಸರು ಕೂಲಂಕಷವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಏನಿದು ಪ್ರಕರಣ ?
ಪಿಎಫ್ಐ ನಾಯಕರು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿ¨ªಾರೆಂಬ ಆರೋಪದಲ್ಲಿ 2022 ಸೆಪ್ಟೆಂಬರ್‌ನಲ್ಲಿ ಕೆ.ಜಿ.ಹಳ್ಳಿ ಪೊಲೀಸರು 17 ಪ್ರದೇಶಗಳಲ್ಲಿ ದಾಳಿ ನಡೆಸಿ 15 ಜನರನ್ನು ವಶಕ್ಕೆ ಪಡೆದಿದ್ದರು. ಪಿಎಫ್ಐ ಕಚೇರಿಗಳಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದವರು ಕರ್ನಾಟಕದಾದ್ಯಂತ ಹಲವಾರು ಅನುಮಾನಾಸ್ಪದ ವ್ಯಕ್ತಿಗಳ ಸಂಪರ್ಕದಲ್ಲಿರುವುದು ಕಂಡು ಬಂದಿತ್ತು. ಒಂದು ಸಮುದಾಯದ ಯುವಕರಿಗೆ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಲು ಪ್ರಚೋದನೆ ನೀಡಿರುವುದು ಗೊತ್ತಾಗಿತ್ತು. ಬಂಧಿತರು ದೇಶದ ವಿರುದ್ಧ ಸಮರ ಸಾರಲು ಪ್ರಚೋದನೆ ನೀಡುವುದು. ಪ್ರಚೋದನಕಾರಿ ವಿಡಿಯೋ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next