Advertisement

ಉ.ಪ್ರದೇಶದ ಅಮ್‌ರೋಹದಲ್ಲಿ ಶಂಕಿತ 5 ಉಗ್ರ ತಾಣಗಳ ಮೇಲೆ NIA ದಾಳಿ

11:00 AM Jan 01, 2019 | Team Udayavani |

ಹೊಸದಿಲ್ಲಿ :  ಐಸಿಸ್‌ ಸಂಘಟನೆ ಪ್ರೇರಿತ ಉಗ್ರ ತಾಣಗಳನ್ನು ಭೇದಿಸಿದ ಕೆಲ ದಿನಗಳ ತರುವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಉತ್ತರ ಪ್ರದೇಶದ ಅಮ್‌ರೋಹಾದಲ್ಲಿನ ಐದು ಉಗ್ರ ತಾಣಗಳ ಮೇಲೆ ಇಂದು ಹೊಸ ದಾಳಿಗಳನ್ನು ನಡೆಸಿದೆ. 

Advertisement

ಕಳೆದ ವಾರವಷ್ಟೇ ಎನ್‌ಐಎ ದಿಲ್ಲಿ ಮತ್ತು ಉತ್ತರ ಪ್ರದೇಶದ ವಿವಿದ ಸ್ಥಳಗಳಲ್ಲಿನ ಶಂಕಿತ ಐಸಿಸ್‌ ಪ್ರೇರಿತ ಉಗ್ರ ತಾಣಗಳ ಮೇಲೆ ದಾಳಿ ನಡೆಸಿ ಕನಿಷ್ಠ ಹತ್ತು ಶಂಕಿತ ಉಗ್ರರನ್ನು ಬಂಧಿಸಿತ್ತು.

ಯುಪಿ ಮತ್ತು ದಿಲ್ಲಿಯಲ್ಲಿ ತಾನು ನಡೆಸಿದ್ದ ಜಂಟಿ ದಾಳಿಗಳನ್ನು ಅನುಸರಿಸಿ ಎನ್‌ಐಎ ಶಂಕಿತ ಉಗ್ರರ ಸುದೀರ್ಘ‌ ಪಟ್ಟಿಯೊಂದನ್ನು ಬಿಡುಗಡೆ ಮಾಡಿತ್ತು. 

ಐಸಿಸ್‌ ಪ್ರೇರಿತ ಹರ್ಕತ್‌ ಉಲ್‌ ಹರ್ಬ್ ಎ ಇಸ್ಲಾಮ್‌ ಎಂಬ ಉಗ್ರ ಸಂಘಟನೆಯು ಉತ್ತರ ಭಾರತದಲ್ಲಿ, ವಿಶೇಷವಾಗಿ ದಿಲ್ಲಿಯಲ್ಲಿ, ಭಯೋತ್ಪಾದಕ ಕೃತ್ಯಗಳನ್ನು ಕೈಗೊಳ್ಳುವ ಯೋಜನೆ ಹೊಂದಿತ್ತು ಎಂದು ಎಐಎ ಐಜಿ ದೃಢೀಕರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next