ನವದೆಹಲಿ:ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಭಯೋತ್ಪಾದಕ ಗ್ಯಾಂಗ್ ಗಳ ವಿರುದ್ಧ ಪಂಜಾಬ್, ಹರ್ಯಾಣ, ದೆಹಲಿ ಮತ್ತು ಎನ್ ಸಿಆರ್ ಸೇರಿದಂತೆ ಸುಮಾರು 60 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಸೋಮವಾರ ದಾಳಿ ನಡೆಸಿದೆ.
ಇದನ್ನೂ ಓದಿ:ಮಳೆ-ಗಾಳಿಗೆ ಸಮುದ್ರ ಪ್ರಕ್ಷುಬ್ಧ : ಬಂದರಿನಲ್ಲಿ ಲಂಗರು ಹಾಕಿದ ಮೀನುಗಾರಿಕೆ ದೋಣಿಗಳು
ಗ್ಯಾಂಗ್ ಸ್ಟರ್ಸ್ ಗಳಾದ ಲಾರೆನ್ಸ್ ಬಿಷ್ಣೋಯಿ, ಕಾಲಾ ಜಥೇಡಿ, ಬಂಬಯ್ಯಾ ಮತ್ತು ಕೌಶಲ್ ಚೌಧರಿ ವಿರುದ್ಧ ಇತ್ತೀಚೆಗೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ಗ್ಯಾಂಗ್ ನ ಸದಸ್ಯರು ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಅಧಿಕಾರಿಯೊಬ್ಬರು ಎಎನ್ ಐಗೆ ತಿಳಿಸಿರುವುದಾಗಿ ವರದಿಯಾಗಿದೆ. ದಾಳಿಗೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಯಾವುದೇ ಸುಳಿವು ನೀಡಿರಲಿಲ್ಲವಾಗಿತ್ತು.
ದೊಡ್ಡ ಪಾತಕಿಗಳಾದ ಬಿಷ್ಣೋಯಿ, ಕಪಿಲ್ ಸಾಂಗ್ವಾನ್ ಮತ್ತು ನೀರಜ್ ಬಾವ್ನಾ ಮತ್ತು ಅವರ ಸಹಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಎನ್ ಐಎ ಸಿದ್ಧತೆ ನಡೆಸಿತ್ತು. ಭಯೋತ್ಪಾದಕರಂತೆ ಹತ್ಯೆ ನಡೆಸುತ್ತಿರುವ ಗ್ಯಾಂಗ್ ಸ್ಟರ್ಸ್ ಗಳ ಎಲ್ಲಾ ನೆಟ್ವರ್ಕ್ ಗಳನ್ನು ಪತ್ತೆ ಹಚ್ಚುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು.